ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ನಟ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಜನ ನಾಯಗನ್ ಚಿತ್ರದ ಕೆಲವೊಂದು ದೃಶ್ಯಗಳನ್ನು ಲೀಕ್ ಮಾಡಲಾಗಿದೆ. ಈ ಪ್ರಕರಣ ಸಂಬಂಧ 6 ಜನರನ್ನು ಬಂಧಿಸಲಾಗಿದೆ. ತಮಿಳುನಾಡು ಕ್ರೈಂ ವಿಭಾಗವು ಆರೋಪಿಗಳನ್ನು ಬಂಧಿಸಿದ್ದು, ಡಿಜಿಟಲ್ ಸಾಕ್ಷಿಗಳನ್ನು ವಶಪಡಿಸಿಕೊಂಡಿದೆ. 300ಕ್ಕೂ ಹೆಚ್ಚು ಪೈರಸಿ ಲಿಂಕ್ ಗಳನ್ನು ಡಿಲೀಟ್ ಮಾಡಿದೆ.
ಜನವರಿ 9 ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಹಲವು ಸಮಸ್ಯೆಗಳಿಂದ ಬಿಡುಗಡೆಯಾಗಲಿಲ್ಲ. ಇದರ ನಡುವೆ ತಮಿಳುನಾಡು ಚುನಾವಣೆ ಬೇರೆ ಘೋಷಣೆ ಆಯಿತು. ನಟ ವಿಜಯ್ ತಮಿಳಿಗ ವೆಟ್ರಿ ಕಳಗಂ ಪಕ್ಷ ಸ್ಥಾಪನೆ ಮಾಡಿದರು. ಹೀಗಾಗಿ ಸಿನಿಮಾ ಮುಂದಕ್ಕೆ ಹೋಗುವಂತೆ ಆಯಿತು. ಹೀಗಿರುವಾಗ ಚಿತ್ರದ 5 ನಿಮಿಷದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆ ಮಾಡಲಾಗಿತ್ತು. ಇದರ ವಿರುದ್ಧ ಏಪ್ರಿಲ್ 12ರಂದು ದೂರು ದಾಖಲಿಸಲಾಗಿತ್ತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.




