ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮಾಜಿ ಸಚಿವ, ಶಾಸಕ ಗಾಲಿ ಜನಾರ್ಧನ್ ರೆಡ್ಡಿಗೆ ಬಳ್ಳಾರಿಗೆ ಹೋಗಲು ಸುಪ್ರೀಂ(Supreme Court) ಕೋರ್ಟ್ ಅನುಮತಿ ನೀಡಿದೆ. ಹೀಗಾಗಿ ಬರೋಬ್ಬರಿ 14 ವರ್ಷಗಳ ಬಳಿಕ ತವರು ಜಿಲ್ಲೆಗೆ ಹೋಗುವ ಅವಕಾಶ ಬಂದಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಜನಾರ್ಧನ್ ರೆಡ್ಡಿ, ನವರಾತ್ರಿ ಪ್ರಾರಂಭವಾಗುವ ದಿನವಾದ ಗುರುವಾರ ಬಳ್ಳಾರಿಗೆ ಹೋಗುತ್ತೇನೆ. ಕೊನೆಯ ಉಸಿರು ಇರುವ ತನಕ ಇಲ್ಲಿಯೇ ಇರುತ್ತೇನೆ ಎಂದಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಜೈಲಿಗೂ ಹೋಗಿ ಬಂದಿರುವ ಶಾಸಕ ಗಾಲಿ(Gali Janardhan Reddy) ಜನಾರ್ಧನ್ ರೆಡ್ಡಿ, ಮಗಳ ಮದುವೆ ಸಂದರ್ಭದಲ್ಲಿ ಬಳ್ಳಾರಿಗೆ ಹೋಗಿರುವುದು ಬಿಟ್ಟರೆ ಕಳೆದ 14 ವರ್ಷಗಳಿಂದ ಜಿಲ್ಲೆಗೆ ಹೋಗಿರಲಿಲ್ಲ. ಜಾಮೀನಿನ ಮೇಲೆ ಹೊರಗೆ ಇರುವ ಜನಾರ್ಧನ್ ರೆಡ್ಡಿಗೆ ಬಳ್ಳಾರಿಗೆ ಪ್ರವೇಶ ನೀಡದಂತೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿತ್ತು. ಈ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಬಳ್ಳಾರಿ ಪ್ರವೇಶಕ್ಕೆ ಅನುಮತಿ ನೀಡಿದೆ. ಸೆಪ್ಟೆಂಬರ್ 5, 2011ರಂದು ಸಿಬಿಐ(CBI) ಅಧಿಕಾರಿಗಳು ಬಂಧಿಸಿದ್ದರು.