ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿ ಹೊಸ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ಮಾತನಾಡಿರುವ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ, ಮುಂದೆ ಸಿಎಂ ಆಗಲು ಅವಕಾಶ ಸಿಕ್ಕರೆ ಜೆಡಿಎಸ್ ನ 18 ಶಾಸಕರ ಬೆಂಬಲ ಪಡೆಯಲು ಕೇಳಿರಬಹುದು ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಮಾಜಿ ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ ಅಂದರೆ ಇದೇ ಕಾರಣಕ್ಕೆ ಇರಬಹುದು. ಬೇರೆ ಕಾರಣ ಇರಲಕ್ಕಿಲ್ಲ. ಆದರೆ, ನಾನು ಎಲ್ಲ ವಿಚಾರದಲ್ಲೂ ತಟಸ್ಥನಾಗಿರುತ್ತೇನೆ ಎಂದಿದ್ದಾರೆ.
ಜಿ.ಟಿ ದೇವೇಗೌಡರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಲಿದೆ. ಯಾಕಂದ್ರೆ ಸಿದ್ದರಾಮಯ್ಯ ನಂತರ ನಾನೇ ಸಿಎಂ ಎನ್ನುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರಗೆ ಶಾಕ್ ಕೊಡಲು ಇದೆಲ್ಲ ನಡೆಯುತ್ತಿದೆಯಂತೆ. ಸಚಿವ ಸತೀಶ್ ಜಾರಕಿಹೊಳಿ ರಾಜಕೀಯಕ್ಕಾಗಿ ತತ್ವ ಸಿದ್ಧಾಂತವೆನ್ನೆಲ್ಲ ಬಿಟ್ಟು ಬಿಜೆಪಿ, ಜೆಡಿಎಸ್ ಜೊತೆ ಕೈ ಜೋಡಿಸುತ್ತಾರ ಎನ್ನುವ ಪ್ರಶ್ನೆ ಮೂಡಿದೆ. ಆದರೆ, ಅಧಿಕಾರದ ಆಸೆ ಎಲ್ಲವನ್ನು ಮಾಡಿಸುತ್ತೆ ಅನ್ನೋ ಮಾತುಗಳು ಸಹ ಕೇಳಿ ಬರುತ್ತಿದ್ದು, ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ.