ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ(Devara Hipparagi): ತಾಲೂಕಿನ ಯಳವಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಗರಾಳ ಡೋಣ ಪುನರ್ ವಸತಿ ಕೇಂದ್ರದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣವಾಗುತ್ತಿದೆ. ಆ ಸ್ಥಳದಲ್ಲಿ ಟ್ಯಾಂಕ್ ನಿರ್ಮಾಣವಾದರೆ ಸುತ್ತಮುತ್ತಲಿನ ನಿವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ತೊಂದರಯಾಗುತ್ತದೆ ಎಂದು, ಜಯ ಕರ್ನಾಟಕ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಗಿದೆ.
ಕೂಡಲೇ ಮೇಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಸೂಕ್ತವಾದ ನ್ಯಾಯ ಒದಗಿಸಿ ಕೊಡಬೇಕೆಂದು ದೇವರ ಹಿಪ್ಪರಗಿ ತಾಲೂಕಾಧ್ಯಕ್ಷರಾದ ಸಿದ್ರಾಮಪ್ಪ ಅವಟಿ, ಹೇಳಿದರು. ಜಿಲ್ಲಾ ವಕ್ತಾರ ಚನ್ನಪ್ಪಗೌಡ ಎಸ್.ಬಿರಾದಾರ ಮಾತನಾಡಿದರು. ಬಳಿಕ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಮಲ್ಲಿನಾಥ ಮಸಳಿ ಇವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಸಿಂದಗಿ ತಾಲೂಕಾಧ್ಯಕ್ಷ ಸಂತೋಷ ಮನಗೂಳಿ, ಹಾಗೂ ದೇವರ ಹಿಪ್ಪರಗಿ ಪದಾಧಿಕಾರಿಗಳಾದ ಭೀಮನಗೌಡ ಜಿ.ಪಾಟೀಲ, ಬಸಪ್ಪ ಯಳವಾರ, ಬಸನಗೌಡ ಪಾಟೀಲ, ಯಮನಪ್ಪ ಡಳಗೊಂಡ, ಶಿವಲಿಂಗಪ್ಪಗೌಡ ಬಿರಾದಾರ, ಸಿದ್ದಪ್ಪ ಕುಮಟಗಿ, ಬಸವಂತ ತಳವಾರ, ಅಶೋಕ ಬಾಗೇವಾಡಿ, ಬಸಪ್ಪ ಚಲವಾದಿ, ಚಂದಪ್ಪ ಕಾಡಪ್ಪಗೋಳ, ಮಲಕಪ್ಪ ಕುರಬರ, ಬಾಪು ಯಾಳವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.