ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಸಂತಶ್ರೇಷ್ಠ, ಸಮಸಮಾಜದ ಸಲುವಾಗಿ ಶ್ರಮಿಸಿದ, ಶೋಷಿತರ ಧ್ವನಿಯಾದ ಮಹಾನ್ ದಾರ್ಶನಿಕ ನಾರಾಯಣ ಗುರುಗಳ ಜಯಂತಿಯನ್ನು ಭಾನುವಾರ ಆಚರಿಸಲಾಯಿತು. ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹಾಗೂ ಸಮಾಜದ ಮುಖಂಡರ ನೇತೃತ್ವದಲ್ಲಿ ನಾರಾಯಣ ಗುರುಗಳ 171ನೇ ಜಯಂತಿಯನ್ನು ಆಚರಿಸಲಾಯಿತು. ಜಾತಿ, ಮತ, ಪಂಥ, ಧರ್ಮ ಎಂದು ಬಡಿದಾಡುತ್ತಿರುವ ಹೊತ್ತಿನಲ್ಲಿ ಸಮಾಜ ಸುಧಾರಣೆಗಾಗಿ ತಮ್ಮ ಜೀವನದ ಮೂಲಕ ಸಂದೇಶ ನೀಡಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಸಮಾಜದ ಮುಖಂಡರು ಹೇಳಿದರು.
ಈ ವೇಳೆ ಈಡಿಗ ಸಮಾಜದ ಅಧ್ಯಕ್ಷ ತಮಣ್ಣ ವಿ.ಈಳಗೇರ, ಉಪ ತಹಶೀಲ್ದಾರ್ ರಾಘವೇಂದ್ರ ಜೋಶಿ, ಕಂದಾಯ ನಿರೀಕ್ಷಕ ಮಕಾಂದರ್, ಸಮಾಜ ಕಲ್ಯಾಣ ಇಲಾಖೆಯ ರಾಯಪ್ಪ ಎಸ್. ಬನ್ನೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಸಮಾಜದ ಮುಖಂಡರಾದ ಸಚಿನ್ ಬಿ.ಈಳಗೇರ, ಅರವಿಂದ ಜ.ಈಳಗೇರ, ಮಹೇಶ ಸಿ.ಗುತ್ತೇದಾರ, ರುಕ್ಮಯ್ಯ ಬ.ಈಳಗೇರ, ಬಸವರಾಜ ಈಳಗೇರ, ನರಸಯ್ಯ ಎನ್.ಈಳಗೇರ, ಸದಾನಂದ ಈಳಗೇರ, ಕಪಿಲ ವಿ.ಈಳಗೇರ, ರಾಮಯ್ಯ ಹೆಚ್.ಗುತ್ತೇದಾರ, ಗುರುರಾಜ ಡಿ.ಗುತ್ತೇದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.