ಬಿಜೆಪಿ ದೋಸ್ತಿ ಮಾಡಿದ ಜೆಡಿಎಸ್

153

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕರ್ನಾಟಕ ಪ್ರಾದೇಶಿಕ ಪಕ್ಷ ಜೆಡಿಎಸ್ ಬಿಜೆಪಿಯೊಂದಿಗೆ ಕೈ ಜೋಡಿಸಿದೆ. ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿಯಾದರು.

ಈ ವೇಳೆ ಸೀಟು ಹಂಚಿಕೆ ಸಂಬಂಧ ಔಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಕುಮಾರಸ್ವಾಮಿ, ಪ್ರಾಥಮಿಕವಾಗಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಆದರೆ, ಅವರ ಮುಂದೆ ಯಾವುದೇ ರೀತಿಯ ಬೇಡಿಕೆ ಇಟ್ಟಿಲ್ಲ ಎಂದಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಜಾತ್ಯಾತೀತೆಯೇ ತಮ್ಮ ಗುರುತಾಗಿಸಿಕೊಂಡಿರುವ ದೇವೇಗೌಡರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದು ನಿರ್ಧಾರ. ಸೀಟು ಹಂಚಿಕೆ ಸಂಬಂಧ ಚರ್ಚಿಸಲು ಸ್ವಲ್ಪ ಸಮಯ ಬೇಕಾಗುತ್ತೆ. ಈ ಕುರಿತು ಇನ್ನು ಚರ್ಚೆ ನಡೆದಿಲ್ಲ ಎಂದರು.

ಜೆಡಿಎಸ್ ಎನ್ ಡಿಎ ಭಾಗವಾಗಿರುವುದು ಖುಷಿ ತಂದಿದೆ. ಅವರು ಹೃದಯಪೂರ್ವ ಸ್ವಾಗತ. ಎನ್ ಡಿಎ ಹಾಗೂ ಹೊಸ ಭಾರತ, ಬಲಿಷ್ಠ ಭಾರತ ಅನ್ನೋ ಪ್ರಧಾನಿಯವರ ದೃಷ್ಟಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಜೆ.ಪಿ ನಡ್ಡಾ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ಈ ವೇಳೆ ಗೋವಾ ಸಿಎಂ ಪ್ರಮೋದ್ ಸಾವಂತ್ ಹಾಜರಿದ್ದರು.


TAG


error: Content is protected !!