ಪ್ರಜಾಸ್ತ್ರ ಸುದ್ದಿ
ರಾಂಚಿ(Ranchi): 81 ವಿಧಾನಸಭಾ ಹಾಗೂ 1 ನಾಮನಿರ್ದೇಶನ ಸದಸ್ಯ ಹಿಡಿದುಕೊಂಡು 82 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್(Jharkhand Assembly)ವಿಧಾನಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ತ್ರಿಪುರಾ, ನ್ಯಾಗಾಲ್ಯಾಂಡ್, ಒಡಿಶಾ ಉಸ್ತುವಾರಿ ಅಜಯ್ ಕುಮಾರ್ ಅವರನ್ನು ಜೆಮೈಡ್ ಪುರ ಪೂರ್ವ ಕ್ಷೇತ್ರ, ಗೃಹ ಸಚಿವ ರಾಮೇಶ್ವರ ಓರಾನ್ ಅವರನ್ನು ಎಸ್ಟಿ ಮೀಸಲು ಕ್ಷೇತ್ರ ಲೋಹಾರದಂಗ ಟಿಕೆಟ್ ನೀಡಲಾಗಿದೆ.
ಇಲ್ಲಿ ಕಾಂಗ್ರೆಸ್(Congress) ಹಾಗೂ ಆಡಳಿತರೂಢ ಜಾರ್ಖಂಡ್ ಮುಕ್ತಿ ಮೋರ್ಚಾ(JMM) ನಡುವೆ ಮೈತ್ರಿಯಾಗಿದೆ. 71 ಕ್ಷೇತ್ರಗಳಲ್ಲಿ ಈ ಎರಡು ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆಯಾಗುತ್ತಿವೆ. ನವೆಂಬರ್ 13 ಹಾಗೂ 20ರಂದು 2 ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.