ಪ್ರಜಾಸ್ತ್ರ ಸುದ್ದಿ
ಪಾಟ್ನಾ: ಬಿಹಾರ(Bihar), ದೆಹಲಿ(Delhi) ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಜಿತಿಯಾ(Jitiya Festival) ಸ್ನಾನದ ಉತ್ಸವ ಆಚರಿಸಲಾಗುತ್ತಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಈ ಉತ್ಸವವಾಗಿದೆ. ಮೂರು ದಿನಗಳ ಕಾಲ ನಡೆಯುತ್ತಿದೆ. ಆದರೆ, ಜಿತಿಯಾ ಸ್ನಾನದ ಉತ್ಸವದಲ್ಲಿ 8 ಮಕ್ಕಳು ಸೇರಿದಂತೆ 40 ಮಂದಿ ಜಲಸಮಾಧಿಯಾದ ದುರಂತ ನಡೆದಿದೆ. ಇದರಲ್ಲಿ ಇಬ್ಬರು ಮಹಿಳೆಯರು, 6 ಬಾಲಕಿಯರಿದ್ದಾರೆ. ಈ ಬಗ್ಗೆ ಬಿಹಾರ ಸರ್ಕಾರ ತನಿಖೆಗೆ ಮುಂದಾಗಿದೆ.
ಔರಂಗಾಬಾದ್, ಚಂಪಾರಣ್, ಸಿವಾನ್, ಸರನ್, ಪಾಟ್ನಾ, ಅರ್ವಾಲ್, ರೋಹಸ್ತಾ, ಕೈಮೂರ್ ಸೇರಿ ವಿವಿಧ ಭಾಗದಲ್ಲಿ ಹರಿದು ಹೋಗಿರುವ ಗಂಗಾ ನದಿಯಲ್ಲಿ ಸ್ನಾನ ಮಾಡುವ ವೇಳೆ ಮುಳುಗಿ ಮೃತಪಟ್ಟಿದ್ದಾರೆ. ಬಟಾನೆ ನದಿಯಲ್ಲಿ 4 ಮಕ್ಕಳ ಮೃತದೇಹ ಪತ್ತೆಯಾಗಿವೆ. ಅಂಕಜ್ ಕುಮಾರ್(08), ಸೋನಾಲಿ ಕುಮಾರಿ(13), ನೀಲಮ್ ಕುಮಾರಿ(12), ಕಾಜಲ್ ಕುಮಾರ್(12), ನಿಶಾ ಕುಮಾರಿ(19), ಚುಲ್ಬುಲಿ(12) ಸೂರಜ್ ಯಾದವ್(10) ಮೃತ ಮಕ್ಕಳೆಂದು ಗುರುತಿಸಲಾಗಿದೆ.
ಮಾಂಝಿ ಪೊಲೀಸ್ ಠಾಣೆ, ಹುಸೈಂಗಂಜ್ ಪೊಲೀಸ್ ಠಾಣೆ, ಬಿಹ್ತಾ ಪೊಲೀಸ್ ಠಾಣೆ, ದಿನಾರಾ ಪೊಲೀಸ್ ಠಾಣೆ, ಸೋನ್ಹಾನ್ ಪೊಲೀಸ್ ಠಾಣೆ, ದೌದಾಪುರ್ ಪೊಲೀಸ್ ಠಾಣೆ, ಕಲ್ಯಾಣಪುರ್ ಪೊಲೀಸ್ ಠಾಣೆ, ಹರಸಿದ್ಧಿ ಪೊಲೀಸ್ ಠಾಣೆ ಹೀಗೆ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಹಾದು ಹೋಗಿರುವ ಗಂಗಾ ನದಿಯಲ್ಲಿ ಈ ದುರಂತ ನಡೆದಿದೆ. ಜಿತಿಯಾ ಸ್ನಾನದ ಬಗ್ಗೆ ಎಚ್ಚರಿಕೆ ವಹಿಸುವಂತೆ ಬಿಹಾರ ಸರ್ಕಾರ ಸೂಚಿಸಿದೆ.