ಪ್ರಜಾಸ್ತ್ರ ಸುದ್ದಿ
ಮುಲ್ತಾನ್ ನಲ್ಲಿ ನಡೆಯುತ್ತಿರುವ ಪಾಕಿಸ್ಥಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಟ್ ಸ್ಫೋಟಕ ಆಟಗಾರ ಜೋ ರೂಟ್(Joe Root) ಭರ್ಜರಿ ಬ್ಯಾಟ್ ಬೀಸುತ್ತಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಪಾಕ್ 556 ರನ್ ಕಲೆ ಹಾಕಿದ್ದರೆ, ಇಂಗ್ಲೆಂಡ್ 658 ರನ್ ಕಲೆ ಹಾಕಿ ಆಡುತ್ತಿದೆ. 4ನೇ ದಿನದಾಟದ ಊಟದ ವೇಳೆ ಜೋ ರೂಟ್ ಅಜೇಯ 259 ರನ್, ಹ್ಯಾರಿ ಬ್ರೂಕ್ ಅಜೇಯ 218 ರನ್ ಗಳೊಂದಿಗೆ ಆಟ ಮುಂದುವರೆಸಿದ್ದಾರೆ. ಇಲ್ಲಿ ಜೋ ರೂಟ್ ದ್ವಿಶತಕದ ಅಬ್ಬರದ ಆಟದೊಂದಿಗೆ ಭಾರತದ ಆಟಗಾರ ವಿರಾಟ್ ಕೊಹ್ಲಿ(Virat Kohli) ಸಾಧನೆಯಲ್ಲಿ ಜೊತೆಯಾಗಿದ್ದಾರೆ. ಜೋ ರೂಟ್ 20 ಸಾವಿರ ರನ್ ಪೂರೈಕೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಇಂಗ್ಲೆಂಡ್ ಮೊದಲ ಆಟಗಾರ ಹಾಗೂ ಸಕ್ರಿಯ ಆಟಗಾರರಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಕಿಂಗ್ ಕೊಹ್ಲಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 595 ಇನ್ನಿಂಗ್ಸ್ ಆಡಿದ್ದಾರೆ. ಇದರಲ್ಲಿ 27,041 ರನ್ ಗಳಿಸಿದ್ದು, ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಂದ 80 ಶತಕ ಗಳಿಸಿದ್ದಾರೆ. ಈ ಮೂಲಕ ರನ್ ಮಷಿನ್ ಖ್ಯಾತಿಯೂ ಪಡೆದಿದ್ದಾರೆ. 457 ಇನ್ನಿಂಗ್ಸ್ ಗಳಿಂದ ಜೋ ರೂಟ್ 20 ಸಾವಿರ ರನ್ ಗಳ ಗಡಿ ದಾಟಿದ್ದು, ಸಕ್ರಿಯ ಆಟಗಾರರಲ್ಲಿ ಇಷ್ಟು ರನ್ ಮಾಡಿದ 2ನೇ ಆಟಗಾರರಾಗಿದ್ದಾರೆ.
ಇನ್ನು ಕೊಹ್ಲಿ 7 ದ್ವಿಶತಕ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್, ಜೋ ರೂಟ್ 6 ದ್ವಿಶತಕ, ಆಸ್ಟ್ರೇಲಿಯಾದ ಸ್ಟೀವ್ ಸ್ಮೀತ್ 4 ದ್ವಿಶತಕ ಸಾಧನೆ ಮಾಡಿದ್ದಾರೆ.