ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಮಕ್ಕಳು ಮತ್ತು ಮಹಿಳೆಯರನ್ನು ಅಪಹರಿಸಿ ಕಾನೂನು ಬಾಹಿರ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವುದು ಬೇಸರದ ಸಂಗತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ(Judge) ನಾಗೇಶ ಮೊಗೇರ ಹೇಳಿದರು. ಮಂಗಳವಾರ ಪಟ್ಟಣದ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಸಿಂದಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಹಾಗೂ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡ ಮಾನವ ಕಳ್ಳ ಸಾಗಾಣಿಕೆ(Human Trafficjung) ವಿರೋಧಿ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅನ್ಯಾಯದ ಮಾರ್ಗದ ಮೂಲಕ ಆರ್ಥಿಕ ಲಾಭದ ಜೊತೆಗೆ ದುರದ್ದೇಶಕ್ಕೆ ಮಾನವ ಸಾಗಾಣಿಕೆ ನಡೆಯುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳು ಜಾಗೃತರಾಗಿರಬೇಕು. ಅನಗತ್ಯ ವಿಚಾರಗಳನ್ನು ಯಾರೂ ಮಾಡಬಾರದು. ನಮ್ಮನ್ನು ನಾವು ಸಂರಕ್ಷಣೆ ಮಾಡಿಕೊಳ್ಳಬೇಕು ಎಂದರು. ಎಸಿಡಿಪಿಒ ಎಸ್.ಎನ್.ಕೋರವಾರ ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ ಅನೇಕ ಕಾಯ್ದೆ ಕಾನೂನುಗಳಿವೆ. ಅವುಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯ. ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಮಹಿಳೆಯರು ಅರಿತುಕೊಂಡಿರಬೇಕು. ಮಹಿಳಾ ಸಹಾಯವಾಣಿ ಮೂಲಕ ಮಕ್ಕಳನ್ನು ಮತ್ತು ಮಹಿಳೆಯರನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ವಕೀಲರ ಸಂಘದ ತಾಲೂಕಾಧ್ಯಕ್ಷ ಎಸ್.ಬಿ.ಪಾಟೀಲ, ಅಪರ ಸರಕಾರಿ ವಕೀಲ ಭೀ.ಜಿ.ನೆಲ್ಲಗಿ, ಪ.ಪೂ ಕಾಲೇಜಿನ ಪ್ರಾಚಾರ್ಯ ಎಮ್.ಎಸ್.ಹೈಯಾಳಕರ ಮಾತನಾಡಿದರು. ಪ್ರಾಚಾರ್ಯ ಎಸ್.ಎಂ.ಪೂಜಾರಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ಸಹಾಯಕ ಶಿಶು ಅಭಿವೃದ್ಧಿ ಯಫಜನಾಧಿಕಾರಿ ಎಸ್.ಎನ್.ಕೋರವಾರ ಪ್ರತಿಜ್ಞಾವಿಧಿ ಬೋಧಿಸಿದರು.
ಉಪನ್ಯಾಸಕರಾದ ಜಿ.ಎಸ್.ಕುಲಕರ್ಣಿ, ಎಸ್.ಸಿ.ದುದ್ದಗಿ, ಎ.ಆರ್.ರಜಪೂತ, ಯು.ಸಿ.ಪೂಜೇರಿ, ಡಿ.ಎಂ.ಪಾಟೀಲ, ಹೇಮಾ ಹಿರೇಮಠ, ಜಿ.ವ್ಹಿ.ಪಾಟೀಲ, ಶೃತಿ ಹೂಗಾರ, ಪ್ರಿಯಾಂಕ ಬ್ಯಾಕೋಡ, ಎಂ.ಕೆ.ಬಿರಾದಾರ, ನೀಲಮ್ಮ ಬಿರಾದಾರ, ಮಂಗಳಾ ಈಳಗೇರ, ಮಮತಾ ಹರನಾಳ, ಶಂಕರ ಕುಂಬಾರ ಸೇರಿದಂತೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಹೇಮಾ ಹಿರಮೇಠ ಸ್ವಾಗತಿಸಿದರು. ವಿದ್ಯಾರ್ಥಿ ಪೂಜಾ ಸಾರಂಗಮಠ ನಿರೂಪಿಸಿದರು. ಮಹಾಂತೇಶ ನೂಲಾನವರ ವಂದಿಸಿದರು.