ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ಸಹ ನಡೆಯಿತು. ಸೋಮವಾರ ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಮೆಡಿಕಲ್ ವಿಚಾರದ ಮೇಲೆ ವಾದ ಮಂಡಿಸಿದ್ದರು. ಇಂದು ಎಸ್ಪಿಪಿ ಪ್ರಸನ್ನಕುಮಾರ್ ಇದಕ್ಕೆ ಆಕ್ಷೇಪವನ್ನು ಮಂಗಳವಾರ ವ್ಯಕ್ತಪಡಿಸಿದರು. ಚಿಕಿತ್ಸೆ ಸಂಬಂಧ ಮೆಡಿಕಲ್ ಬೋರ್ಡ್ ನಿಂದ ಒಪ್ಪಿಗೆ ಬೇಕು ಎಂದು ಹೇಳಿದರು. ಈ ವೇಳೆ ನ್ಯಾಯಾಧೀಶರು, ನಿಮಗೆ ಜಾಮೀನು ಬೇಕಾ? ಚಿಕಿತ್ಸೆ ಬೇಕಾ ಎಂದು ಪ್ರಶ್ನಿಸಿದರು. ಇದಕ್ಕೆ ಸಿ.ವಿ ನಾಗೇಶ್ ಎರಡೂ ಬೇಕು ಎಂದರು.
3 ತಿಂಗಳು ಮಧ್ಯಂತರ ಜಾಮೀನು ಕೊಡಿ. ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಅವರು ಹೇಳಿದ ಬಳಿಕ ಹೇಳಬಹುದು. ಹೀಗಾಗಿ ಮೊದಲು 3 ತಿಂಗಳು ಜಾಮೀನು ಕೊಡಿ ಎಂದು ಸಿ.ವಿ ನಾಗೇಶ್ ಮನವಿ ಸಲ್ಲಿಸಿದರು. ಅವರಿಗೆ ಚಿಕಿತ್ಸೆ ಕೊಡಿಸದಿದ್ದರೆ ಆರೋಗ್ಯ ಸಮಸ್ಯೆ ಹೆಚ್ಚಾಗಲಿದೆ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಮೂರು ತಿಂಗಳು ಜಾಮೀನು ಸೂಕ್ತವಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇನ್ನು ಮಧ್ಯಂತರ ಜಾಮೀನು ತೀರ್ಪುನ್ನು ಬುಧವಾರಕ್ಕೆ ಮುಂದೂಡಲಾಗಿದೆ.