ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಸ್ತೆ ಸಂಚಾರದ ವೇಳೆ ನಿಯಮಗಳನ್ನು ಪಾಲಿಸುವ ವೇಳೆ ಕೆಲವೊಂದಿಷ್ಟು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ. ಟ್ರಾಫಿಕ್ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದು ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಹಲವು ರೀತಿಯ ಸರ್ಕಸ್ ಮಾಡುತ್ತಾರೆ. ಇಲ್ಲೊಬ್ಬ ಬೈಕ್ ಹಿಂಬದಿ ಸವಾರ ಕಡಾಯಿಯನ್ನು ಹೆಲ್ಮೆಟ್ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಈ ಒಂದು ದೃಶ್ಯ ಕಂಡು ಬಂದಿದೆ.
ರೂಪೇನ ಅಗ್ರಹಾರದ ಹತ್ತಿರದ ಸಿಗ್ನಲ್ ಬಳಿ ಈ ದೃಶ್ಯ ಸೆರೆಯಾಗಿದೆ. ಸಿಗ್ನಲ್ ಬಿದ್ದಿದ್ದರಿಂದ ವಾಹನಗಳು ನಿಂತಿವೆ. ಬೈಕ್ ವೊಂದರ ಹಿಂಬದಿ ಸವಾರ ಕಡಾಯಿಯನ್ನು ಹೆಲ್ಮೆಟ್ ರೀತಿ ಬಳಿಸಿದ್ದನ್ನು ಹಿಂದಿನ ಮತ್ತೊಂದು ವಾಹನದಲ್ಲಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.




