ಸಿಂದಗಿಯಲ್ಲಿ ಕನಕ ಕೀರ್ತನ ಗಾಯನ ಸ್ಪರ್ಧೆ

1975

ಸಿಂದಗಿ: ತಾಲೂಕ ಕನಕದಾಸ ಜಯಂತ್ಯೋತ್ಸವ ಸಮಿತಿ ಹಾಗೂ ಹಾಲುಮತ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಕನಕ ಕೀರ್ತನ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಕನಕದಾಸರ ಜಯಂತಿ ಅಂಗವಾಗಿ ನವೆಂಬರ್ 13ರಂದು ಪಟ್ಟಣದ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸ್ಪರ್ಧೆಯನ್ನ ಆಯೋಜಿಸಲಾಗಿದೆ.

ತಾಲೂಕಿನ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದರಲ್ಲಿ ಭಾಗವಹಿಸಬಹುದು. ಪ್ರಥಮ ಬಹುಮಾನ 2,500, ದ್ವಿತೀಯ ಬಹುಮಾನ 2000 ಹಾಗೂ ತೃತೀಯ ಬಹುಮಾನ 1,500 ರೂಪಾಯಿ ಜೊತೆಗೆ ಪ್ರಮಾಣ ಪತ್ರ, ಸ್ಮರಣಿಕೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೇವು ಮಾಕೊಂಡ (9620007518), ಪ್ರೊ.ಎಫ್ ಎ ಹಾಲಪ್ಪನವರ (9743228429), ಎಸ್ ಜಿ ತೇಲಿ  (9611269780) ಹಾಗೂ ರಾಜು ಹಿರೇಕುರುಬರ (9606658271) ಅವರನ್ನ ಸಂಪರ್ಕಿಸಲು ಕೋರಲಾಗಿದೆ.

ಓದುಗರ ಗಮನಕ್ಕೆerror: Content is protected !!