ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಕುರಿತಾದ ಎಮರ್ಜೆನ್ಸಿ ಸಿನಿಮಾದಲ್ಲಿ ನಟಿಸಿರುವ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್, ಚಿತ್ರದ ಪ್ರಚಾರದ ಸಂದರ್ಭದಲ್ಲಿ ಇಂದಿರಾ ಗಾಂಧಿ ದುರ್ಬಲರು ಎಂದು ತಿಳಿಯಿತು ಎಂದಿದ್ದಾರೆ. ಅವರು ಗಟ್ಟಿಗಿತ್ತಿ ಎಂದು ತಿಳಿದುಕೊಂಡಿದ್ದೆ. ಆದರೆ, ಸಂಶೋಧನೆಯಲ್ಲಿ ತಿಳಿಯಿತು ಅವರ ಬಗ್ಗೆಯೇ ಅವರಲ್ಲಿ ಸ್ಪಷ್ಟತೆ ಇರಲಿಲ್ಲವೆಂದು ಅಂತಾ ಹೇಳಿದ್ದಾರೆ.
ಸಿನಿಮಾದಲ್ಲಿ ತುರ್ತು ಪರಿಸ್ಥಿತಿಯ ದಿನಗಳನ್ನು ತೋರಿಸಲು ಹಿಂದೇಟು ಹಾಕಿಲ್ಲ. ಅವರು ಯಾವಗಲೂ ನಿಯಂತ್ರಣ ಬಯಸುತ್ತಿದ್ದರು. ಅವರ ಸುತ್ತಲು ಅನೇಕರಿದ್ದರು. ಈ ಮೂಲಕ ಅನೇಕರ ಮೇಲೆ ಅವಲಂಬಿತರಾಗಿದ್ದರು. ಅವರ ಬಗ್ಗೆ ಅವರಿಗೆ ಸ್ಪಷ್ಟತೆ ಇರಲಿಲ್ಲ. ಈ ಚಿತ್ರದಲ್ಲಿ ಭಾಗಿಯಾಗುವುದಕ್ಕೂ ಮೊದಲು ಅವರು ಬಲಿಷ್ಠರು ಎಂದು ಭಾವಿಸಿದ್ದೆ. ಆದರೆ, ಸಂಶೋಧನೆ ಶುರು ಮಾಡಿದ ಬಳಿಕ ತಿಳಿಯಿತು ಅವರು ದುರ್ಬಲರು ಎಂದು ಅಂತಾ ನಟಿ ಕಂಗನಾ ಹೇಳಿದ್ದಾರೆ. ಅಲ್ಲದೆ ಸಧ್ಯದ ಚಿತ್ರರಂಗದಲ್ಲಿ ತನ್ನನ್ನು ನಿರ್ದೇಶನ ಮಾಡುವಂತವರು ಯಾರೂ ಇಲ್ಲ. ನನ್ನನ್ನು ನಿರ್ದೇಶನ ಮಾಡುವಷ್ಟ ಅರ್ಹತೆ, ಗುಣಮಟ್ಟ ಇರುವವರು ಇಲ್ಲಿವೆಂದು ಭಾವಿಸಿದ್ದೇನೆ ಎನ್ನುವ ಮೂಲಕ ತನ್ನಷ್ಟಕ್ಕೆ ತಾನೇ ಶ್ರೇಷ್ಠ ಎಂದು ಹೇಳಿಕೊಂಡಿದ್ದಾರೆ.