Ad imageAd image

ಆಫ್ರಿಕಾ ವಿರುದ್ಧ ಕಾಂಗರೂಗಳ ಆರ್ಭಟ: 3 ಶತಕ.. 431 ರನ್

Nagesh Talawar
ಆಫ್ರಿಕಾ ವಿರುದ್ಧ ಕಾಂಗರೂಗಳ ಆರ್ಭಟ: 3 ಶತಕ.. 431 ರನ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸೌಥ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಎಂದರೆ ಅದು ನಿಜಕ್ಕೂ ರಣರೋಚಕ. ಬದ್ಧ ವೈರಿಗಳಂತೆ ಇವರ ಆಟವಿರುತ್ತೆ. 3 ಏಕದಿನ ಪಂದ್ಯಗಳ ಸರಣಿಯಲ್ಲಿ ತವರು ನೆಲದಲ್ಲಿಯೇ ಆಸ್ಟ್ರೇಲಿಯಾ ಸೋತಿದೆ. ಆದರೆ, ಕೊನೆಯ ಪಂದ್ಯದಲ್ಲಿ ದಾಖಲೆಯ ಗೆಲುವು ಸಾಧಿಸುವ ಮೂಲಕ ಸೌಥ್ ಆಫ್ರಿಕೆ ಪಡೆಯನ್ನು ಎಂದಿಗೂ ಕಾಡುವಂತೆ ಮಾಡಿದೆ. ಯಾಕಂದ್ರೆ ಏಕದಿನ ಪಂದ್ಯದಲ್ಲಿ ಬರೋಬ್ಬರಿ 431 ರನ್ ಬಾರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಅಕ್ಷರಶಃ ರನ್ ಮಳೆ ಸುರಿಸಿದೆ. ಮೂವರು ಶತಕ ಸಿಡಿಸಿದರೆ, ಒಬ್ಬ ಅರ್ಧ ಶತಕ ಬಾರಿಸಿದ್ದಾನೆ. ಟ್ರಾವಿಸ್ ಹೆಡ್ 142(5 ಸಿಕ್ಸ್, 17 ಫೋರ್), ನಾಯಕ ಮಿಚಲ್ ಮಾರ್ಸ್ 100 (5 ಸಿಕ್ಸ್, 6 ಫೋರ್) ಹಾಗೂ ಕಾಮರೂನ್ ಗ್ರೀನ್ ಅಜೇಯ 118(8 ಸಿಕ್ಸ್, 6 ಫೋರ್ ಹಾಗೂ ಅಲೆಕ್ಸ್ ಕ್ಯಾರಿ ಅಜೇಯ 50(7ಫೋರ್) ರನ್ ಬಾರಿಸಿದ್ದಾರೆ. ಇದರೊಂದಿಗೆ ಕೇವಲ 2 ವಿಕೆಟ್ ಕಳೆದುಕೊಂಡು ಬರೋಬ್ಬರಿ 431 ರನ್ ಗಳಿಸಿದ್ದಾರೆ. 19 ವರ್ಷಗಳ ಬಳಿಕ ದಿಕ್ಷಿಣ ಆಫ್ರಿಕಾ ವಿರುದ್ಧ ಮತ್ತೊಮ್ಮೆ 400 ರನ್ ಗಳ ಗಡಿ ದಾಡಿದೆ. 2006ರಲ್ಲಿ 434 ರನ್ ಗಳಿಸಿತ್ತು.

ಈ ಪಂದ್ಯದಲ್ಲಿ ಹತ್ತು ಹಲವು ದಾಖಲೆಗಳು ಉಡೀಸ್ ಆಗಿವೆ. 2015ರಲ್ಲಿ ಅಫ್ಘಾನಿಸ್ತಾನ್ ವಿರುದ್ಧ 417 ರನ್ ಗಳಿಸಿತ್ತು. 10 ವರ್ಷಗಳ ಬಳಿಕ ಮತ್ತೊಮ್ಮೆ 400ಕ್ಕೂ ಹೆಚ್ಚು ರನ್ ಬಾರಿಸಿದೆ. ಇದರ ಜೊತೆಗೆ ಮೂವರು ಟಾಪ್ ಬ್ಯಾಟ್ಸ್ ಮನ್ ಗಳು ಶತಕ ಸಿಡಿಸಿದ್ದು ಸಹ 10 ವರ್ಷಗಳ ನಂತರವಾಗಿದೆ. 2015ರಲ್ಲಿ ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ, ರುಸ್ಸೋ ಹಾಗೂ ಎಬಿಡಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ್ದರು.

ಇನ್ನು ಆಸೀಸ್ ನೀಡಿದ್ದ 431 ರನ್ ಗಳ ದೊಡ್ಡ ಮೊತ್ತ ಬೆನ್ನು ಹತ್ತಿದ್ದ ದಕ್ಷಿಣ ಆಫ್ರಿಕಾ ಯಾವುದೇ ಹೋರಾಟವಿಲ್ಲದೆ ಕೇವಲ 155 ರನ್ ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಅನುಭವಿಸಿದೆ. ಆಸೀಸ್ ಪರ ಕೊನ್ಲೆ 5 ವಿಕೆಟ್ ಪಡೆದು ಮಿಂಚಿದರು. ಬ್ರೆಟ್ಲೆಟ್ 2, ಅಬೌಟ್ 2 ವಿಕೆಟ್ ಪಡೆದರೆ, ಆಡಂ ಜಂಪಾ 1 ವಿಕೆಟ್ ಪಡೆದರು. ಟ್ರಾವಿಸ್ ಹೆಡ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಪ್ಲೇಯರ್ ಆಫ್ ದಿ ಸಿರೀಸ್ ಆದರು.

WhatsApp Group Join Now
Telegram Group Join Now
Share This Article