ಸಿನಿಮಾ ಪ್ರಚಾರಕ್ಕಾಗಿ ನಟಿ ಆಶಿಕಾ ಇಂಥಾ ಕೆಲಸ!

287

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ನಟಿ ಆಶಿಕಾ ರಂಗನಾಥ್ ಕುರಿತಾದ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಅದೇನು ಅಂದರೆ, ನಟಿ ಕುಡಿದು ಪೊಲೀಸರೊಂದಿಗೆ ಗಲಾಟೆ ಮಾಡಿದ್ದಾರೆ. ಮಿಡಲ್ ಫಿಂಗರ್ ತೋರಿಸಿದ್ದಾರೆ ಎಂದು ಹೇಳಿ ಟ್ರೋಲ್ ನಡೆಸಲಾಗುತ್ತಿದೆ.

ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂದು ಜನರು ಕಿಡಿ ಕಾರುತ್ತಿದ್ದಾರೆ. ರೆಮೋ ಚಿತ್ರದ ಶೂಟಿಂಗ್ ವೇಳೆಯ ಮೇಕಿಂಗ್ ವಿಡಿಯೋ ಬಳಸಿಕೊಂಡು ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ನವೆಂಬರ್ 25ಕ್ಕೆ ಚಿತ್ರ ರಿಲೀಸ್ ಆಗುತ್ತಿದ್ದು, ಕೀಳು ಮಟ್ಟದ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಕಿಡಿ ಕಾರಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಇಷ್ಟೊಂದು ಟ್ರೋಲ್ ಆಗುತ್ತಿದ್ದರೂ ಇದುವರೆಗೂ ನಟಿ ಆಶಿಕಾ ಆಗಲಿ, ರೆಮೋ ಚಿತ್ರ ತಂಡವಾಗಲಿ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಬೇಕಂತಲೇ ಈ ರೀತಿ ಮಾಡಿದ್ದಾರೆ ಅಂತಾ ಸಾರ್ವಜನಿಕರು ವಾಗ್ದಾಳಿ ನಡೆಸಿದ್ದಾರೆ.
error: Content is protected !!