ಮಂತ್ರ ಮಾಂಗಲ್ಯ ಮೂಲಕ ‘ಮಳೆ ಹುಡುಗಿ’ ಮದುವೆ

329

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಇವತ್ತಿನ ದಿನಮಾನದಲ್ಲಿ ಮದುವೆ ಅನ್ನೋದು ತುಂಬಾ ಅದ್ಧೂರಿ ಹಾಗೂ ಆಡಂಬರವಾಗಿದೆ. ಉದ್ಯಮಿಗಳ ಮಕ್ಕಳು, ಸಿನಿಮಾ, ಕ್ರೀಡಾ ತಾರೆಯರ ಮದುವೆ ಎಂದರೆ ಮುಗಿಯಿತು. ನೂರಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ, ಚಂದನವನದ ಮಳೆ ಹುಡುಗಿ ಪೂಜಾ ಗಾಂಧಿ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾಗುತ್ತಿದ್ದಾರೆ.

ಈ ಕುರಿತು ಮಾಧ್ಯಮದವರಿಗೆ ತಾವೇ ಕನ್ನಡದಲ್ಲಿ ಆಮಂತ್ರಣ ಪತ್ರಿಕೆ ಬರೆದು ಕಳಿಸಿದ್ದಾರೆ. ನನ್ನ ಚಿತ್ರ ಜೀವನದ ಎಲ್ಲ ಬೆಳವಣಿಗೆಯಲ್ಲಿ ನೀವು ನನ್ನ ಜೊತೆಗಿದ್ದೀರಿ. ನವೆಂಬರ್ 29 ಸಂಜೆ ವಿಜಯ್ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದೇನೆ. ಕುಟುಂಬದವರಾಗಿ ನೀವು ಬಂದ ಹರಸಿ ಆಶೀರ್ವದಿಸಿ ಎಂದಿದ್ದಾರೆ.

40 ವರ್ಷದ ನಟಿ ಪೂಜಾ ಗಾಂಧಿ 2006ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಮುಂಗಾರು ಮಳೆ ಚಿತ್ರದ ಮೂಲಕ ಸಿನಿ ಕರಿಯರ್ ಶುರು ಮಾಡಿದರು. ನಂತರ ಕನ್ನಡ, ತಮಿಳು ಚಿತ್ರಗಳಲ್ಲಿ ನಟಿಸಿದರು. ತಾವೇ ಸಿನಿಮಾ ನಿರ್ಮಾಣ ಸಹ ಮಾಡಿದರು. ಕಳೆದ ಎರಡ್ಮೂರು ವರ್ಷಗಳಿಂದ ಕನ್ನಡ ಅಭ್ಯಾಸ ಮಾಡುತ್ತಿರುವ ನಟಿ, ತಮ್ಮ ಮದುವೆ ಆಹ್ವಾನವನ್ನು ಕನ್ನಡದಲ್ಲೇ ಬರೆದು ಕಳುಹಿಸಿದ್ದಾರೆ.
error: Content is protected !!