ಪ್ರಜಾಸ್ತ್ರ ಸುದ್ದಿ
ಕಾಂತಾರ ಸಿನಿಮಾ ಕನ್ನಡ ಸಿನಿಲೋಕ ಮಾತ್ರದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಿತು. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಚಿತ್ರ ಬ್ಲಾಕ್ ಬ್ಲಸ್ಟರ್ ಹಿಟ್ ಆಯ್ತು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಹ ಬಂದಿತು. ಇದೀಗ ಕಾಂತಾರ ಭಾಗ-1ರ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 2, 2025ರಂದು ವರ್ಲ್ಡ್ ವೈಡ್ ಸಿನಿಮಾ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲ್ಮ್ ದಿನಾಂಕ ಘೋಷಿಸಿದೆ.
ಇತ್ತೀಚಿನ ದಿನಗಳಲ್ಲಿ ಸೀಕ್ವೆಲ್, ಪ್ರೀಕ್ವೆಲ್ ಗಳ ಅಬ್ಬರ ಜೋರಾಗಿದೆ. ಅದೇ ರೀತಿ ಕಾಂತಾರ ಸಿನಿಮಾ ಪ್ರೀಕ್ವೆಲ್ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಒಟ್ಟು 7 ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಇಷ್ಟು ಭಾಷೆಗಳ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಕದಂಬರ ಕಾಲದ ಕಥೆಯನ್ನು ಇಲ್ಲಿ ಹೇಳಲು ಚಿತ್ರತಂಡ ಹೊರಟಿದೆ.