ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬೆಳಗಾವಿಯಲ್ಲಿ ಎಂಇಎಸ್ ಪುಂಡರ ದಬ್ಬಾಳಿಕೆಯನ್ನು ಖಂಡಿಸಿ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ಕೊಡಲಾಗಿದೆ. ಇಂದು ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆಯಿತು. ಅಂದು ಅಖಂಡ ಕರ್ನಾಟಕ ಬಂದ್ ಎಂದು ಹೇಳಲಾಯಿತು. ಸಭೆಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸ್ವಾಭಿಮಾನಕ್ಕಾಗಿ ಅಂದು ಯಾರು ಗಾಡಿ ಹತ್ತಬೇಡಿ, ಮೆಟ್ರೋ ಸಂಚಾರ ಮಾಡಬೇಡಿ ಎಂದರು.
ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ಬಂದ್ ಇರಲಿದೆ. ಮುಂಜಾನೆ 10.30ಕ್ಕೆ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಅಂದು ಬಸ್ ಸಂಚಾರ ನಡೆಸಬೇಡಿ ಎಂದು ಸಾರಿಗೆ ಸಚಿವರೊಂದಿಗೆ ಮಾತನಾಡಿದ್ದೇವೆ. ಸಚಿವರು, ಸಿಎಂ ಕಾರು ಚಾಲಕರು ಸಹ ಸ್ವಾಭಿಮಾನಕ್ಕಾಗಿ ಅಂದು ಗಾಡಿ ಹತ್ತಬೇಡಿ. ಬೆಳಗಾವಿಯಿಂದ ಎಂಇಎಸ್ ಪುಂಡರನ್ನು ಒದ್ದು ಓಡಿಸೋಣ ಎಂದರು. ವಿವಿಧ ಕನ್ನಡ ಪರ ಸಂಘಟನೆಗಳು, ವಿವಿಧ ಸಂಘಟನೆಗಳು, ಸಂಸ್ಥೆಗಳು ಬಂದ್ ಗೆ ಬೆಂಬಲ ಸೂಚಿಸಿವೆ.