Ad imageAd image

ಜಿ.ಚಂದ್ರಕಾಂತರವರಿಗೆ ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿ

ಗಾಯಕ ಹಾಗೂ ಕಲಬುರಗಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಜಿ.ಚಂದ್ರಕಾಂತ ಅವರಿಗೆ ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Nagesh Talawar
ಜಿ.ಚಂದ್ರಕಾಂತರವರಿಗೆ ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೀದರ(Bidara): ಗಾಯಕ ಹಾಗೂ ಕಲಬುರಗಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಜಿ.ಚಂದ್ರಕಾಂತ ಅವರಿಗೆ ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿ(Award) ನೀಡಿ ಗೌರವಿಸಲಾಗಿದೆ. ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ವತಿಯಿಂದ ಭಾನುವಾರ ನಗರದ ಪೂಜ್ಯ ಡಾ.ಚೆನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ನಡೆದ ಕರ್ನಾಟಕ 50ರ ಸಂಭ್ರಮ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಲವು ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸರ್ಕಾರಿ ಸೇವೆ ಸಲ್ಲಿಸುತ್ತಲೇ ಗಾಯನದಲ್ಲಿ ತೊಡಗಿಸಿಕೊಂಡು, ನಿವೃತ್ತಿಯ ನಂತರವೂ ಅದನ್ನು ಮುಂದುವರೆಸಿರುವ ಜಿ.ಚಂದ್ರಕಾಂತ್ ಅವರು ಕನ್ನಡ ಗೀತೆಗಳು ಹಾಗೂ ವಚನ ಗಾಯನ ಪ್ರದರ್ಶನ ನೀಡಿದರು. ರಾಷ್ಟ್ರಕವಿ ಕುವೆಂಪು(Kuvempu) ವಿರಚಿತ ಕನ್ನಡ ಎನೆ ಕುಣಿದಾಡುವುದೆನ್ನೆದೆ ಕವಿತೆಯನ್ನು ಭೀಮಪಲಾಸಿ ರಾಗದಲ್ಲಿ, ಅಣ್ಣ ಬಸವಣ್ಣನವರ(Basavanna) ಇವನಾರವ ಇವನಾರವ ಇವನಾರವನೆಂದೆನಿಸದರಿಯ್ಯ ವಚನವನ್ನು ಅಹೀರ ಭೈರವ ರಾಗದಲ್ಲಿ ಹಾಡಿ ಎಲ್ಲರನ್ನು ರಂಜಿಸಿದರು.

ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ನಿವೃತ್ತ ವಾರ್ತಾಧಿಕಾರಿ ಜಿ.ಚಂದ್ರಕಾಂತ, ಮಹಿಮಾ ಮೊಗವೀರ, ರಾಹುಲ ಮಿಶ್ರಾ ಬಿಹಾರ, ಭೀಮ ನೀಲಕಂಠರಾವ ಹಂಗರಗಿ, ಸಾದಿಕ್ ಅಹ್ಮದ್ ಕೋಲಾರ, ಮೌನೇಶ ಕರಕಿಹಳ್ಳಿ, ಡಾ.ಮಲ್ಲಯ್ಯ ಅತ್ತನೂರ, ಬಕ್ಕಪ್ಪ ದಂಡಿನ, ವಸಂತ ಬಾರಡ್ಕ ಕಾಸರಗೋಡು, ಅಶೋಕಕುಮಾರ ಎನ್.ಕಲ್ಯಾಣಿ, ಭೀಮರೆಡ್ಡಿ ಸಿಂಧನಕೇರಾ, ಮಾನಶಪ್ಪ ಚಿಕ್ಕಬುದೂರ, ಅಂಬಿಕಾ ಕಲಬುರಗಿ, ಡಾ.ಶ್ರೀನಿವಾಸ ಹೊಸಪೇಟೆ, ಸಂತೋಷ ಚೇಟ್ಟೆ, ಡಾ.ಗವಿಸಿದ್ದಪ್ಪ ಪಾಟೀಲ ಸೇರಿ ಮುಂತಾದವರಿಗೆ ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಚನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು. ವಿಶ್ವ ಕನ್ನಡಿಗರ ಸಂಸ್ಥೆಯ ರಾಜ್ಯಾಧ್ಯಕ್ಷ ಸುಬ್ಬಣ್ಣ ಕರಕನಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಓ.ಎಂ ಮಚ್ಚೆ ಸೇರಿ ಅನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
TAGGED:
Share This Article