Ad imageAd image

‘ನುಲಿಯ ಚಂದಯ್ಯನವರ ವಚನಗಳಲ್ಲಿ ಕಾಯಕ ಮಹತ್ವದ ಚಿಂತನೆ’

12ನೇ ಶತಮಾನದ ಬಸವಾದಿ ಶರಣರ ಸಮಕಾಲೀನರಾದ ಶರಣ ನುಲಿಯ ಚಂದಯ್ಯ ಅವರ ವಚನಗಳಲ್ಲಿ ಕಾಯಕ ಹಾಗೂ ದಾಸೋಹ ಮಹತ್ವದ ಚಿಂತನೆಗಳು ಹಾಸುಹೊಕ್ಕಾಗಿವೆ.

Nagesh Talawar
‘ನುಲಿಯ ಚಂದಯ್ಯನವರ ವಚನಗಳಲ್ಲಿ ಕಾಯಕ ಮಹತ್ವದ ಚಿಂತನೆ’
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): 12ನೇ ಶತಮಾನದ ಬಸವಾದಿ ಶರಣರ ಸಮಕಾಲೀನರಾದ ಶರಣ ನುಲಿಯ(nuliya chandayya) ಚಂದಯ್ಯ ಅವರ ವಚನಗಳಲ್ಲಿ ಕಾಯಕ ಹಾಗೂ ದಾಸೋಹ ಮಹತ್ವದ ಚಿಂತನೆಗಳು ಹಾಸುಹೊಕ್ಕಾಗಿವೆ. ಇವರ ಜೀವನಾದರ್ಶ ಹಾಗೂ ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲ್ಲಿ ಅಳವಡಿಸಿಕೊಳ್ಳಬೇಕು. ಎಂದು ವಿಜಯಪುರ ತಹಶೀಲ್ದಾರ್ ಪ್ರಶಾಂತ ಚನಗೊಂಡ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಜಯಪುರ ಜಿಲ್ಲೆಯ ಶಿವಣಗಿಯವರಾದ ಶರಣ ನುಲಿಯ ಚಂದಯ್ಯನವರು, ಕಾಯಕ ತತ್ವದ ಮಹತ್ವವನ್ನು ವಚನಗಳ ಮೂಲಕ ಸಾರಿ, ಭಾವಶುದ್ಧತೆಯಿಂದ ಕಾಯಕ ಮಾಡಬೇಕೆನ್ನುವ ನಿಟ್ಟಿನಲ್ಲಿ ಜೀವನ ನಡೆಸಿ ಮನುಕುಲದ ಉನ್ನತಿಗೆ ಶ್ರಮಿಸಿದ್ದಾರೆ. ಅವರ ವಿಚಾರಗಳನ್ನು ಅಳವಡಿಸಿಕೊಂಡು ಆದರ್ಶಮಯವಾದ ಜೀವನ ನಡೆಸಬೇಕು ಎಂದು ಹೇಳಿದರು.

ಪ್ರವಾಸೊಧ್ಯಮ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಭಜಂತ್ರಿ ಮಾತನಾಡಿ, ಶರಣರ ಚಿಂತನೆಗಳ ಅಧ್ಯಯನ ಮಾಡುವ ಮೂಲಕ ಅವರ ವಚನಗಳು ಹಾಗೂ ಸಂದೇಶಗಳ ಸಾರ ಇಂದಿನ ಯುವ ಜನತೆ ಅರಿತುಕೊಳ್ಳಬೇಕು ಎಂದರು. ವಿದ್ಯಾವತಿ ಅಂಕಲಗಿ ಅವರು ಉಪನ್ಯಾಸ ನೀಡಿ, ಶರಣ ಅನುಭಾವಿ, ವಚನಕಾರ ನುಲಿಯ ಚಂದಯ್ಯ ಅವರ ಕಾಯಕ ನಿಷ್ಠೆ ಅಪಾರ. ಅವರ ವಚನಗಳಲ್ಲಿ ಸಮಸಮಾಜದ ನಿರ್ಮಾಣದ ತಾತ್ವಿಕ ಚಿಂತನೆಗಳು ಅಡಕವಾಗಿವೆ. ವಿಜಯಪುರ ಜಿಲ್ಲೆಯ ಶಿವಣಗಿ ಚಂದಯ್ಯ ಅವರ ಹುಟ್ಟೂರು. ಬಸವಾದಿ ಶರಣರೊಂದಿಗೆ ಅನುಭವ ಮಂಟಪದಲ್ಲಿದ್ದ ಶರಣ ಚಂದಯ್ಯ ಚಂದೇಶ್ವರಲಿಂಗ ಎಂಬ ನಾಮಾಂಕಿತದಿಂದ ತಮ್ಮ ವಚನಗಳನ್ನು ರಚಿಸಿದ್ದಾರೆ ಎಂದರು.

ಗೋವಿಂದರಾವ್ ಭಜಂತ್ರಿ ಅವರು ಮಾತನಾಡಿದರು. ದಾನಮ್ಮ ಅಲ್ದಿ ಹಾಗೂ ಸಂಗಡಿಗರು ಸುಮಧುರ ವಚನ ಗಾಯನ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ವಿಭಾಗದ ಅಧಿಕಾರಿ ಎ.ಬಿ. ಅಲ್ಲಾಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ರವೀಂದ್ರ ಜಾಧವ, ಶ್ರೀದೇವಿ ಉತ್ಲಾಸಕರ್, ಕೃಷ್ಣ ಭಜಂತ್ರಿ, ವಸಂತ ಭಜಂತ್ರಿ, ಅಶೋಕ್ ಜಾಧವ್, ಭೀಮಶಿ ಭಜಂತ್ರಿ, ಗಿರಿಮಲ್ಲಪ್ಪ ಭಜಂತ್ರಿ, ಹಣಮಂತ ಭಜಂತ್ರಿ ದರ್ಗಾ, ದೇವೆಂದ್ರ ಮಿರೇಕರ, ಸುಭಾಸ್ ಕನ್ನೂರ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನುಲಿಯ ಚಂದಯ್ಯ ಭಾವಚಿತ್ರ ಮೆರವಣಿಗೆಗೆ ಚಾಲನೆ:

ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 9.30 ಗಂಟೆಗೆ ಆರಂಭವಾದ ನುಲಿ ಚಂದಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ಕರ್ನಾಟಕ ಬಾಲವಿಕಾಸ ಅಕಾಡಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಚಾಲನೆ ನೀಡಿದರು. ಮೆರವಣಿಗೆಯು ಕಲಾ ತಂಡದೊಂದಿಗೆ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಕನಕದಾಸ ವೃತ್ತದಿಂದ ಆಗಮಿಸಿ, ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೇರಿ ಇತರರಿದ್ದರು.

WhatsApp Group Join Now
Telegram Group Join Now
Share This Article