ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜಧಾನಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಯಾವುದೇ ವಸ್ತುಗಳನ್ನು ಬಿಡದೆ ಕದಿಯುವ ಕೆಲಸ ನಡೆಯುತ್ತಿದೆ. ಇದೀಗ ಕ್ರೇಟ್ ಸಮೇತ ಹಾಲಿನ ಪ್ಯಾಕೇಟ್ ಗಳನ್ನು ಕದಿಯುತ್ತಿದ್ದಾರೆ. ಸುಬ್ರಹ್ಮಣ್ಯಪುರದಲ್ಲಿ ಮುಂಜಾನೆ 4 ಗಂಟೆಗೆ ಅನ್ ಲೋಡ್ ಮಾಡಿ ಹೋದ ಹಾಲಿನ ಪ್ಯಾಕೇಟ್ ಗಳನ್ನು ಕ್ರೇಟ್ ಸಮೇತ ಕದ್ದು ಪರಾರಿಯಾಗಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕನಕಪುರ ರಸ್ತೆಯಲ್ಲಿ ಬೈಕ್ ನಲ್ಲಿ ಬಂದ ಕಳ್ಳರು ಹಾಲಿನ ಕ್ರೇಟ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಹೀಗೆ ಯಾವುದನ್ನೇ ಬಿಡದೆ ಕಳ್ಳತನ ಮಾಡುವ ಮೂಲಕ ಸಾರ್ವಜನಿಕರ ಬದುಕಿನೊಂದಿಗೆ ಕಳ್ಳರು ಆಟವಾಡುತ್ತಿದ್ದಾರೆ. ಪೊಲೀಸರು ಇಂತಹವ ಹೆಡೆಮುರಿ ಕಟ್ಟಬೇಕಿದೆ. ದುಡಿದುಕೊಂಡು ತಿನ್ನುವವರ ಹೊಟ್ಟೆ ಮೇಲೆ ಹೊಡೆಯುವ ಇಂತಹವ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕಿದೆ.