ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandaya): ಶನಿವಾರದಿಂದ ಶುರುವಾಗಿರುವ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕಾರ್ಯಕ್ರಮದಲ್ಲಿ ಸಿನಿ ರಂಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದ ಹಿನ್ನಲೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಗರಂ ಆಗಿದ್ದರು. ಇಂದು ಕಾಂಗ್ರೆಸ್ ಶಾಸಕ ರವಿಕುಮಾರ ಗಣಿಗ ಸಹ ವಾಗ್ದಾಳಿ ನಡೆಸಿದ್ದು, ನಮ್ಮ ಸರ್ಕಾರ ಪ್ರಶಸ್ತಿ ಕೊಟ್ಟರೆ ಬೇಡ ಅಂತೀರಿ. ಹಿಂದಿಯವರು ಪ್ರಶಸ್ತಿ ಕೊಟ್ಟರೆ ಓಡಿ ಹೋಗಿ ತಗೋತೀರಿ ಎಂದು ಪರೋಕ್ಷವಾಗಿ ನಟ ಕಿಚ್ಚ ಸುದೀಪ್ ವಿರುದ್ಧ ಕಿಡಿ ಕಾರಿದ್ದಾರೆ.
ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಬಳಿಕ ನಟ ಶಿವರಾಜಕುಮಾರ್ ಬಂದಿದ್ದಾರೆ. ಉಳಿದವರಿಗೆ ಏನಾಗಿದೆ? ಆಂಧ್ರದಲ್ಲಿ ರೇವಂತ್ ರೆಡ್ಡಿ ರೀತಿ ನಾವೂ ಮಾಡಬೇಕು. ವಿಧಾನಸೌಧ ಮುಂಭಾಗದಲ್ಲಿ ಕಾರ್ಯಕ್ರಮ ಮಾಡಿ ಆಹ್ವಾನ ನೀಡಿದರು ಯಾಕೆ ಬಂದಿಲ್ಲ. ಕನ್ನಡ ಕಾರ್ಯಕ್ರಮ ಅಂದರೆ ಕನ್ನಡದ ನಟ, ನಟಿಯರಿಗೆ ಅಸಡ್ಡೆಯೇ ಎಂದು ಪ್ರಶ್ನಿಸಿದ್ದು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದರಲ್ಲಿ ತಪ್ಪಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ.