ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ(Chamarajanagara): ಇದೀಗ ಎಲ್ಲೆಡೆ ಕಳ್ಳರ ಹಾವಳಿ ಜೋರಾಗಿದೆ. ಮನೆ, ಬ್ಯಾಂಕ್, ಅಂಗಡಿಗಳ ಕಳ್ಳತನ(Theft Case) ಹೆಚ್ಚಾಗಿದ್ದು ಸಾರ್ವಜನಿಕರು ಆತಂಕದಲ್ಲಿದ್ದಾರೆ. ಇಂತಹ ಕಳ್ಳರನ್ನು ಮಟ್ಟ ಹಾಕುವ ಪೊಲೀಸ್ ಠಾಣೆಯಿಂದಲೇ ಬೈಕ್ ಕಳ್ಳತನ ಮಾಡಲಾಗಿದೆ. ಚಾಮರಾಜನಗರ ಸಿಇಎನ್(CEN Police) ಪೊಲೀಸ್ ಠಾಣೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಕಿಲಾಡಿ ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಬೈಕ್ ಕಳ್ಳತನವಾಗಿದೆ.
ಎನ್ ಡಿಪಿಎಸ್(NDPS) ಪ್ರಕರಣದಲ್ಲಿ ಸಿಇಎನ್ ಪೊಲೀಸರು ಬೈಕ್ ವೊಂದನ್ನು ವಶಕ್ಕೆ ಪಡೆದಿದ್ದರು. ಆ ಬೈಕ್(Bike) ಅನ್ನು ಕಳ್ಳನೊಬ್ಬ ತಡರಾತ್ರಿ ಠಾಣೆಗೆ ಬಂದು ಕದ್ದುಕೊಂಡು ಹೋಗಿದ್ದು, ಎಲ್ಲರಿಗೂ ಅಚ್ಚರಿಯಾಗಿದೆ. ಜೊತೆಗೆ ಪೊಲೀಸ್ ಠಾಣೆಯೂ ಸುರಕ್ಷತೆಯಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ರಾತ್ರಿ ಪಾಳೆಯದಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸುತ್ತಿದ್ದಾರೆ. ಇದೀಗ ಕಿಲಾಡಿ ಕಳ್ಳನನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ.