Ad imageAd image

ರಾಜಧಾನಿಯಲ್ಲಿ ಕಿಲಾಡಿಯ ಕೈ ಚಳಕ

ಕಳ್ಳರು ತಮ್ಮ ಕೈಚಳಕ ತೋರಿಸಲು ಏನೆಲ್ಲ ಸಂಚು ರೂಪಿಸುತ್ತಾರೆ ಎನ್ನುವುದೇ ಸೋಜಿಗ. ಅವರ ಕಳ್ಳಾಟ ಬಯಲಾದಾಗ ಹೀಗೂ ಕಳ್ಳತನ ಮಾಡುತ್ತಾರ

Nagesh Talawar
ರಾಜಧಾನಿಯಲ್ಲಿ ಕಿಲಾಡಿಯ ಕೈ ಚಳಕ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕಳ್ಳರು(Thieves) ತಮ್ಮ ಕೈಚಳಕ ತೋರಿಸಲು ಏನೆಲ್ಲ ಸಂಚು ರೂಪಿಸುತ್ತಾರೆ ಎನ್ನುವುದೇ ಸೋಜಿಗ. ಅವರ ಕಳ್ಳಾಟ ಬಯಲಾದಾಗ ಹೀಗೂ ಕಳ್ಳತನ(Theft) ಮಾಡುತ್ತಾರ ಎನಿಸುತ್ತೆ. ಇಲ್ಲೊಬ್ಬ ಕಿಲಾಡಿ ಮನೆಯ ಮೇಲೆ ಪಾರಿವಾಳ ಹಾರಿಸಿ ಕಳ್ಳತನ ಮಾಡುತ್ತಿದ್ದ. ಹೀಗೆ ಪಾರಿವಾಳ ಹಾರಿಸಿಯೇ ಬರೋಬ್ಬರಿ 50ಕ್ಕೂ ಹೆಚ್ಚು ಮನಗಳನ್ನು ಕಳ್ಳತನ ಮಾಡಿದ್ದಾನೆ. ಅವನೆ ಮಂಜ ಅಲಿಯಾಸ್ ಪಾರಿವಾಳ ಮಂಜ. ನಗರ್ತಪೇಟೆಯ ನಿವಾಸಿ ಈತ.

38 ವರ್ಷದ ಪಾರಿವಾಳ ಮಂಜ ತಾನು ಸಾಕಿದ ಪಾರಿವಾಳಗಳನ್ನು ಬಹುಮಹಡಿ ಕಟ್ಟಡಗಳ ಮೇಲೆ ಹಾರಿಸುತ್ತಿದ್ದ. ಅವುಗಳನ್ನ ಹಿಡಿಯುವ ನೆಪದಲ್ಲಿ ಯಾವ ಮನೆಗಳಿಗೆ ಬೀಗ ಹಾಕಿದೆ ಎನ್ನುವುದನ್ನು ಗುರುತಿಸುತ್ತಿದ್ದ. ನಂತರ ಸಮಯ ನೋಡಿ ಬೀಗ ಮುರಿದು ಮನೆಯಲ್ಲಿನ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ. ಇತನ್ನು ಬಂಧಿಸಿದ ಬಳಿಕ ಹಲಸೂರು ಗೇಟು, ಸಿಟಿ ಮಾರ್ಕೆಟ್ ವ್ಯಾಪ್ತಿಯಲ್ಲಿ ನಾಲ್ಕು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಇವನು ಈ ಹಿಂದೆ ಜೈಲಿಗೆ ಹೋಗಿ ಬಂದಿದ್ದಾನೆ. ಕಳ್ಳತನವನ್ನೇ ಉದ್ಯೋಗ ಮಾಡಿಕೊಂಡಿರುವ ಪಾರಿವಾಳ(Dove) ಮಂಜ ಅದನ್ನು ಮುಂದುವರೆಸುತ್ತಿದ್ದಾನೆ. ಜಾಮೀನು ಮೇಲೆ ಹೊರಗೆ ಬರುವ ಇಂತವರು ಪದೆಪದೆ ಅಪರಾಧಿ ಕೃತ್ಯಗಳನ್ನು ನಡೆಸುತ್ತಿದ್ದರೂ ಇವರ ಮೇಲೆ ಕಠಿಣ ಕಾನೂನು ಕ್ರಮವಾಗದಿರುವುದು ಅಮಾಯಕರ ಮನೆಗಳ್ಳತನ ನಡೆಯುತ್ತಿದೆ. ಮನೆಯ ಹೊರಗೆ ಒಣಹಾಕುವ ಬಟ್ಟೆಯಿಂದ, ಚಪ್ಪಲಿಯಿಂದ ಈ ಮನೆಯಲ್ಲಿ ಎಷ್ಟು ಜನ ಇರಬಹುದು ಅನ್ನೋದು ಅಂದಾಜಿಸಿ ಕಳ್ಳತನ ಮಾಡುವವರು ಸಹ ಇದ್ದಾರೆ.

WhatsApp Group Join Now
Telegram Group Join Now
Share This Article