ಪ್ರಜಾಸ್ತ್ರ ಸುದ್ದಿ
ಕೊಡಗು(Kodagu): ಒಂಟಿ ಮನೆಯಲ್ಲಿದ್ದ ನಾಲ್ವರನ್ನು ಹತ್ಯೆ ಮಾಡಿದ ಭೀಕರ ಘಟನೆ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಹತ್ತಿರ ನಡೆದಿದೆ. ಕಾಳ, ಗೌರಿ ಹಾಗೂ ಇವರ ಮಗಳಾದ ನಾಗಿ, ಈಕೆಯ ಮಗಳಾದ ಕಾವೇರಿ ಕೊಲೆಯಾದ ದುರ್ದೈವಿಗಳು. ನಾಗಿಯ ಪತಿ ಗಿರೀಶ್ ನಾಪತ್ತೆಯಾಗಿದ್ದಾನೆ. ಈತನು ಇಲ್ಲಿಯೇ ವಾಸವಿದ್ದನಂತೆ.
ಇಂದು ಮಧ್ಯಾಹ್ನದ ತನಕವಾದರೂ ಕೂಲಿ ಕೆಲಸಕ್ಕೆ ಬರದೆ ಇರುವುದನ್ನು ಕಂಡು ಇತರೆ ಕಾರ್ಮಿಕರು ಇವರ ಮನೆಗೆ ಬಂದಿದ್ದಾರೆ. ಅವರಿಗೆ ದೊಡ್ಡ ಆಘಾತವೇ ಆಗಿದೆ. ಮನೆಯಲ್ಲಿ ನಾಲ್ವರ ಕೊಲೆಯಾಗಿದೆ. ಸ್ಥಳಕ್ಕೆ ಎಸ್ಪಿ ಕೆ.ರಾಮರಾಜನ್ ಸೇರಿ ಪೊಲೀಸರ ತಂಡ ಆಗಮಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲಾಗುತ್ತಿದೆ. ಯಾರು ಕೊಲೆ ಮಾಡಿದ್ದು, ಯಾವ ಕಾರಣಕ್ಕೆ, ಗಿರೀಶ್ ಎಲ್ಲಿ ಹೋದ ಎಲ್ಲದರ ತನಿಖೆ ನಡೆದಿದೆ.