Ad imageAd image

ಅನೈತಿಕ ಸಂಬಂಧ: ಪ್ರೇಯಿಸಿ ಮಗನ ಕೊಂದ ಕಿರಾತಕ!

ತಮ್ಮಿಬ್ಬರ ಅನೈತಿಕ ಸಂಬಂಧಕ್ಕೆ ಮಗು ಅಡ್ಡವಾಗಿದೆ ಎಂದು ಹತ್ಯೆ ಮಾಡಿದ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಾಕಲವಾರ ಗ್ರಾಮದಲ್ಲಿ ನಡೆದಿದೆ.

Nagesh Talawar
ಅನೈತಿಕ ಸಂಬಂಧ: ಪ್ರೇಯಿಸಿ ಮಗನ ಕೊಂದ ಕಿರಾತಕ!
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಯಾದಗಿರಿ(Yadagiri): ತಮ್ಮಿಬ್ಬರ ಅನೈತಿಕ ಸಂಬಂಧಕ್ಕೆ ಮಗು ಅಡ್ಡವಾಗಿದೆ ಎಂದು ಹತ್ಯೆ ಮಾಡಿದ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಾಕಲವಾರ ಗ್ರಾಮದಲ್ಲಿ ನಡೆದಿದೆ. 11 ವರ್ಷದ ನರೇಂದ್ರ ಹತ್ಯೆಯಾದ ಬಾಲಕ. ಅಬ್ದುಲ್ ಕೊಲೆ ಆರೋಪಿ. ಇವನಿಗೂ ಹತ್ಯೆಯಾದ ನರೇಂದ್ರ ತಾಯಿ ಗೋವಿಂದಮ್ಮಳಿಗೂ ಅನೈತಿಕ ಸಂಬಂಧವಿದೆಯಂತೆ. ಆಕೆಯೊಂದ ಓಡಿ ಹೋಗಲು ನಿರ್ಧರಿಸಿದ್ದನಂತೆ. ಆದರೆ, ಮಗುವಿದೆ ಎಂದು ನಿರಾಕರಿಸುತ್ತಾ ಬಂದಿದ್ದಾಳೆ. ಇದೇ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಮಗುವಿಗೆ ಚಾಕಲೇಟ್ ಕೊಡಿಸುವುದಾಗಿ ಹೇಳಿ ಕಿರಾಣಿ ಅಂಗಡಿಗೆ ಕರೆದುಕೊಂಡು ಹೋಗಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣವನ್ನು ಬಯಲಿಗೆಳೆದಿರುವ ಪೊಲೀಸರು ಹಂತಕನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

WhatsApp Group Join Now
Telegram Group Join Now
Share This Article