ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ ವಿಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ. ವೆಸ್ಟ್ ವಿಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 162 ರನ್ ಗಳಿಗೆ ಆಲೌಟ್ ಆಗಿದೆ. ಭಾರತ ತನ್ನ ಬ್ಯಾಟಿಂಗ್ ನಡೆಸಿದ್ದು, 2ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟೆಕ್ಕೆ 448 ರನ್ ಗಳಿಸಿ 286 ರನ್ ಮುನ್ನಡೆ ಸಾಧಿಸಿದೆ.
ಕನ್ನಡಿಗ ಕೆ.ಎಲ್ ರಾಹುಲ್ 100, ವಿಕೆಟ್ ಕೀಪರ್ ಧ್ರುವ್ ಜುರ್ಲೆ 125 ರನ್ ಗಳಿಸಿ ಅಬ್ಬರಿಸಿದರು. ಇನ್ನು ಅನುಭವಿ ಆಲ್ ರೌಂಡರ್ ರವೀಂದ್ರ ಜಡೇಜಾ 104 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ವಾಸಿಂಗ್ಟನ್ ಸುಂದರ್ 9 ರನ್ ಗಳಿಸಿ ಕ್ರಿಸ್ ನಲ್ಲಿದ್ದಾರೆ. ವೆಸ್ಟ್ ವಿಂಡೀಸ್ ಪರ ರೋಸ್ಟನ್ ಚೇಸ್ 2 ವಿಕೆಟ್ ಪಡೆದಿದ್ದಾರೆ. ಪಿರ್ರೆ, ವಾರಿಕನ್, ಸೀಲ್ಸ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.