ಪ್ರಜಾಸ್ತ್ರ ಸುದ್ದಿ
ಚಿಕ್ಕಬಳ್ಳಾಪುರ(Chikkaballapura): ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಸ್ನೇಹಿತನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಚಿಂತಾಮಣಿಯ ಆರ್ ಟಿಒ ಕಚೇರಿ ಹತ್ತಿರ ನಡೆದಿದೆ. ಆನಂದ್ ಎಂಬಾತನಿಗೆ ಸುರೇಶ್ ಎನ್ನುವ ಸ್ನೇಹಿತ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಗಾಯಾಳು ಆನಂದನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಸಪ್ಪಂಗಿಹಳ್ಳಿಗೆ ಬೆಂಗಳೂರು ಮೂಲದ ಆನಂದ್ ಹಾಗೂ ಸುರೇಶ್ ಬಂದಿದ್ದಾರೆ. ಇವರಿಬ್ಬರು ದೇವರಬಿಸನಹಳ್ಳಿಯ ಆದರ್ಶ ಟ್ರೀ ಫಾರಂನಲ್ಲಿ ಚಾಲಕರಾಗಿದ್ದಾರೆ. ಹಣದ ವ್ಯವಹಾರವಾಗಿ ಜಗಳವಾಗಿದೆ. ಈ ವೇಳೆ ಸುರೇಶ್ ಚಾಕುವಿನಿಂದ ಆನಂದೆಗೆ ಇರುದು ಕೊಲೆಗೆ ಯತ್ನಿಸಿದ್ದು, ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.