Ad imageAd image

ಕೊಡಗು: ನಾಲ್ವರ ಹತ್ಯೆ ಪ್ರಕರಣ, ಹಂತಕ ಬಂಧನ

Nagesh Talawar
ಕೊಡಗು: ನಾಲ್ವರ ಹತ್ಯೆ ಪ್ರಕರಣ, ಹಂತಕ ಬಂಧನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕೊಡಗು(Kodagu): ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬೇಗೂರು ಹತ್ತಿರದ ಒಂಟಿ ಮನೆಯಲ್ಲಿ ನಡೆದ ನಾಲ್ವರ ಹತ್ಯೆ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 9 ಗಂಟೆಯಲ್ಲಿ ಆರೋಪಿ ಗಿರೀಶ್(35) ಎಂಬಾತನನ್ನು ಕೇರಳದ ತಲಪುಳ ಎಂಬಲ್ಲಿ ಬಂಧಿಸಲಾಗಿದೆ. ಗುರುವಾರ ರಾತ್ರಿ ಕೊಲೆ ನಡೆದಿದೆ. ಶುಕ್ರವಾರ ಮಧ್ಯಾಹ್ನ ವಿಷಯ ತಿಳಿದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಕೊಲೆ ಆರೋಪಿಯ ಬಂಧನಕ್ಕೆ ತಂಡವನ್ನು ರಚಿಸಲಾಗಿತ್ತು.

ಕೊಲೆಯಾದ ನಾಗಿಯ 3ನೇ ಗಂಡ ಈ ಗಿರೀಶ್ ಅಂತೆ. ಕಳೆದೊಂದು ವರ್ಷದಿಂದ ಒಟ್ಟಿಗೆ ಸಂಸಾರ ಮಾಡುತ್ತಿದ್ದರಂತೆ. 2ನೇ ಗಂಡನ ಜೊತೆಗೆ ಮತ್ತೆ ಸಂಬಂಧ ಬೆಳೆಸಿದ್ದಾಳೆ ಎನ್ನುವ ಸಂಶಯದ ಮೇಲೆ  7 ವರ್ಷದ ಮಗು ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ್ದಾನೆ. ಕರಿಯ(75), ಗೌರಿ(70), ಇವರ ಮಗಳು ನಾಗಿ(35), ಈಕೆಯ ಮಗಳು ಕಾವೇರಿ(07) ಕೊಲೆಯಾದ ದುರ್ದೈವಿಗಳು.

WhatsApp Group Join Now
Telegram Group Join Now
Share This Article