ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ(Kolkata): ಇಲ್ಲಿಯ ಈಡನ್ ಗಾರ್ಡನ್ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಐಪಿಎಲ್ 2025 ಟೂರ್ನಿಯ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. ಕೆಕೆಆರ್ ನೀಡಿದ್ದ 175 ರನ್ ಗಳ ಗುರಿಯನ್ನು ಆರ್ ಸಿಬಿ 3 ವಿಕೆಟ್ ನಷ್ಟಕ್ಕೆ 16.2 ಓವರ್ ಗಳಲ್ಲಿ 177 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಟೂರ್ನಿಯನ್ನು ಗೆಲುವಿನೊಂದಿಗೆ ಆರಂಭಿಸಿ ಅಭಿಮಾನಿಗಳಿಗೆ ಕಿಕ್ ಕೊಟ್ಟರು.
ಪಿಲ್ ಸಾಲ್ಟ್ 31 ಬೌಲ್ ಗಳಲ್ಲಿ 56, ಕೊಹ್ಲಿ 36 ಬೌಲ್ ಗಳಲ್ಲಿ ಅಜೇಯ 59 ರನ್, ನಾಯಕ ರಜತ್ ಪಟೀದಾರ್ 16 ಬೌಲ್ ಗಳಲ್ಲಿ 34 ರನ್ ಗಳ ಆಟದಿಂದ ಈ ಗೆಲುವು ಬಂದಿತು. ಪಡಿಕಲ್ 10 ರನ್ ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಕೆಕೆಆರ್ ಪರ ವೈಬವ್ ಅರೋರಾ, ವರುಣ್ ಚಕ್ರವರ್ತಿ, ಸುನಿಲ್ ನರೈನ್ ತಲಾ 1 ವಿಕೆಟ್ ಪಡೆದರು.
ಆರ್ ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಕೆಕೆಆರ್ ಮೊದಲು ಬ್ಯಾಟ್ ಮಾಡಿತು. ನಾಯಕ ರಹಾನೆ 56, ಸುನಿಲ್ ನರೈನ್ 44, ರಘುವಂಶಿ 30 ರನ್ ಗಳಿಂದಾಗಿ 8 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಆರ್ ಸಿಬಿ ಪರ ಕುನಾಲ್ ಪಾಂಡ್ಯೆ 3 ವಿಕೆಟ್ ಕಿತ್ತು ಮಿಂಚಿದರು. ಹಝಲ್ ವುಡ್ 2, ಯಶ್ ದಯಾಳ್, ರಸಿಖ್ ಸಲ್ಮಾ, ಸುಯೇಶ್ ಶರ್ಮಾ ತಲಾ 1 ವಿಕೆಟ್ ಪಡೆದರು. ಕುನಾಲ್ ಪಾಂಡ್ಯೆ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.