ಪ್ರಜಾಸ್ತ್ರ ಸುದ್ದಿ
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಟೂರ್ನಿಯಲ್ಲಿ ಟೀಂ ಇಂಡಿಯಾ ಭಾನುವಾರ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಿತು. ರನ್ ಮಷಿನ್ ವಿರಾಟ್ ಕೊಹ್ಲಿ ಭರ್ಜರಿ ಅಜೇಯ ಶತಕದ ಆಟ ಹಲವು ದಾಖಲೆಗಳನ್ನು ಬರೆಯಿತು. ಮೊದಲು ಬ್ಯಾಟ್ ಮಾಡಿದ ಪಾಕ್ 240 ರನ್ ಗಳಿಗೆ ಆಲೌಟ್ ಆಗಿತ್ತು. ಇದನ್ನು ಭಾರತ 42.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 244 ರನ್ ಗಳಿಸಿ ಜಯ ಸಾಧಿಸಿತು. ಇಲ್ಲಿ ಕಿಂಗ್ ಕೊಹ್ಲಿ ಬಾರಿಸಿದ ಶತಕ ಹಲವು ದಾಖಲೆಗಳನ್ನು ಉಡೀಸ್ ಮಾಡಿದೆ.
ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ಕೊಹ್ಲಿ ಮುಂದುವರೆಸಿದರು. ಸಚಿನ್ ತೆಂಡೂಲ್ಕರ್ 49 ಶತಕ ಗಳಿಸಿದರೆ ಕೊಹ್ಲಿ 51ನೇ ಶತಕ ದಾಖಲಿಸಿದರು. ಇನ್ನು 287 ಇನ್ನಿಂಗ್ಸ್ ಗಳಲ್ಲಿ 14 ಸಾವಿರ ರನ್ ಗಳನ್ನು ದಾಟುವ ಮೂಲಕ ಅತಿ ವೇಗವಾಗಿ 14 ಸಾವಿರ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಭಾರತದ ಮಾಜಿ ಆಟಗಾರ ಮೊಹಮ್ಮದ್ ಅಜರುದ್ದೀನ್ ಅವರು 156 ಕ್ಯಾಚ್ ಗಳನ್ನು ಹಿಡಿದ್ದರೆ ಕೊಹ್ಲಿ 158 ಕ್ಯಾಚ್ ಹಿಡಿದು ಈ ದಾಖಲೆ ಮುರಿದರು. ಇನ್ನು ಒಂದೇ ತಂಡದ ವಿರುದ್ಧ 5 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಗೌರವ ಪಡೆದ ಮತ್ತೊಬ್ಬರಲ್ಲ. ಹೀಗೆ ತಮ್ಮ ಎಂದಿನ ಆಟಕ್ಕೆ ಕಮ್ ಬ್ಯಾಕ್ ಮಾಡಿ ಹಲವು ರೆಕಾರ್ಡ್ ಬ್ರೇಕ್ ಮಾಡಿ ಅಭಿಮಾನಿಗಳನ್ನು ರಂಜಿಸಿದರು.