ಪ್ರಜಾಸ್ತ್ರ ಸುದ್ದಿ
ನ್ಯೂಯಾರ್ಕ್(New York): ಇಲ್ಲಿ ನಡೆಯುತ್ತಿರುವ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ ಟೂರ್ನಿಯಲ್ಲಿ ಭಾರತದ ಚೆಸ್ ತಾರೆ 37 ವರ್ಷದ ಕೊನೇರು ಹಂಪಿ(Koneru Humpy) ಚೆಸ್ ಚಾಂಪಿಯನ್ ಆಗಿದ್ದಾರೆ. ಇಂಡೋನೇಷ್ಯಾದ ಐರನ್ ಸುಕಂದರ್ ಅವರನ್ನು ಫೈನಲ್ ಪಂದ್ಯದಲ್ಲಿ ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ 2ನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿದ್ದಾರೆ.
2019ರಲ್ಲಿ ಜಾರ್ಜಿಯಾದಲ್ಲಿ ನಡೆದ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. 8.5 ಅಂಕಗಳನ್ನು ಗಳಿಸುವ ಮೂಲಕ 2024ನೇ ಸಾಲಿನ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಇತ್ತೀಚೆಗೆ ಡಿ.ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ. ಇದರೊಂದಿಗೆ ಈ ವರ್ಷ ಭಾರತದ ಚೆಸ್ ಪಾಲಿಗೆ ಖುಷಿಯ ವರ್ಷವಾಗಿದೆ.