ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಟೀಂನಿಂದ ಹೊಸ ಹೊಸ ದಾಳಗಳನ್ನು ಉರುಳಿಸಲಾಗುತ್ತಿದೆ. ಅದರಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವೂ ಒಂದಾಗಿದೆ. ಈ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್ ಕಟ್ಟಿ ಹಾಕಲು ನೋಡಲಾಗುತ್ತಿದೆ. ಈ ಬಗ್ಗೆ ಶನಿವಾರ ನಗರದಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುತ್ತದೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರೆ ಹೇಳಿದ್ದಾರೆ. ಸಧ್ಯ ಆಗದೆ ಇರಬಹುದು. ಆದರೆ ಬದಲಾವಣೆ ಆಗಿಯೇ ಆಗುತ್ತದೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ. ಆದರೆ, ನಾನು ಅಧ್ಯಕ್ಷನಾಗಬೇಕು ಎಂದು ಬೆಂಬಲಿಗರು, ಮುಖಂಡರು ಹೇಳುತ್ತಿದ್ದಾರೆ. ಸಮಯ ಬಂದಾಗ ನೋಡೋಣ ಎಂದರು. ಇನ್ನು ಬಜೆಟ್ ಬಳಿಕ ಸಿಎಂ ಬದಲಾವಣೆ, ಸಚಿವ ಸಂಪುಟ ಪುನರ್ ರಚನ್ ವಿಚಾರದ ಬಗ್ಗೆ ಮಾತನಾಡಿ, ನಾನು ಸಚಿವ ಸಂಪುಟದಲ್ಲಿ ನಾನೂ ಒಬ್ಬ. ಈ ಕುರಿತು ಚರ್ಚಿಸುವ ಅಧಿಕಾರ ನಮಗಿಲ್ಲ. ಇದೆಲ್ಲವನ್ನು ಹೈಕಮಾಂಡ್ ನೋಡಿಕೊಳ್ಳುತ್ತೆ. ಸಚಿವರ ಕಾರ್ಯವೈಖರಿ ಬಗ್ಗೆ ಈಗಾಗ್ಲೇ ವರದಿ ತರೆಸಿಕೊಂಡಿದೆ. ಸಚಿವರ ಪ್ರಗತಿ ನೋಡಿ ಯಾರನ್ನು ಕೈ ಬಿಡಬೇಕು. ಯಾರನ್ನು ತೆಗೆದುಕೊಳ್ಳಬೇಕು ಅನ್ನೋದು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.