ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರ ವಿಚಾರಣೆ, ಕಠಿಣ ಶಿಕ್ಷೆಯನ್ನು ಜಾರಿಗೆ ತರಬೇಕು ಎನ್ನುವ ವಿಚಾರ ಸಂಬಂಧ ಮಂಗಳೂರಿನಿಂದ ದೆಹಲಿಯವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದ ಕೆಆರ್ ಎಸ್(KRS Party) ಪಕ್ಷದ ಉಪಾಧ್ಯಕ್ಷ ಸೇರಿ ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಾಜ್ಯ ಉಪಾಧ್ಯಕ್ಷ ಎಚ್.ಲಿಂಗೇಗೌಡ ಹಾಗೂ ಮೂಸಾ ಷರೀಫ್ ಮೃತ ದುರ್ದೈವಿಗಳು.
ಅಕ್ಟೋಬರ್ 17ರಂದು ಮಂಗಳೂರಿನಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಪ್ರವೀಣ್ ಮುಂದಾಳತ್ವದಲ್ಲಿ ಮೂಸಾ ಷರೀಫ್, ಬಾಲಕೃಷ್ಣ, ಶುಕ್ರ ಅಹ್ಮದ್, ನೌಫುಲ್ ಅಬ್ಬಾಸ್, ಹಮ್ಝಾ, ಎಚ್.ಲಿಂಗೇಗೌಡ ತಂಡದ ಬುಧವಾರ 55ನೇ ದಿನದ ಪಾದಯಾತ್ರೆ ಗುಜರಾತಿನ ಸೂರತ್ ಹಾಗೂ ಅಹಮದಾಬಾದ್ ಮಧ್ಯೆ ಸಾಗುತ್ತಿತ್ತು. ಈ ವೇಳೆ ಲಾರಿ ಹರಿದು ಈ ಇಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ಕೆಆರ್ ಎಸ್ ಪಕ್ಷದ ಪ್ರತಿಯೊಬ್ಬರಿಗೂ ಹಾಗೂ ಅವರ ಸ್ನೇಹ ಬಳಗಕ್ಕೆ ದೊಡ್ಡ ಆಘಾತವಾಗಿದೆ.