ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದ ಎಪಿಎಂಸಿ ಆವರಣದಲ್ಲಿನ ಕಚೇರಿಯಲ್ಲಿ ವಿಶ್ವ ರೈತ ದಿನವನ್ನು ಕರ್ನಾಟಕ ರಾಜ್ಯ ಸಂಘದ ತಾಲೂಕು ಘಟಕದಿಂದ ಆಚರಿಸಲಾಯಿತು. ಇದೇ ವೇಳೆ ರೈತ ನಾಯಕ ಕೆ.ಎಸ್ ಪುಟ್ಟಣ್ಣಯ್ಯ ಅವರ ಜನ್ಮದಿನದ ನಿಮಿತ್ಯ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸಂಘ ಬೆಳಗಾವಿ ವಿಭಾಗದ ಉಪಾಧ್ಯಕ್ಷ ಬಸನಗೌಡ ಧರ್ಮಗೊಂಡ, ವಿಶ್ವ ರೈತ ದಿನಾಚರಣೆ ಹಿನ್ನಲೆಯಲ್ಲಿ ಇಂದು ಮೈಸೂರು ಜಿಲ್ಲೆಯಲ್ಲಿ ಕೆ.ಎಸ್ ಪುಟ್ಟಣ್ಣಯ್ಯನವರ ಕಂಚಿನ ಪುತ್ಥಳಿ ಅನಾವರಣಗೊಳಿಸಲಾಗುತ್ತಿದೆ. ರೈತರ ಸಲುವಾಗಿ ಸಂಘಟನೆಯನ್ನು ಕಟ್ಟಿ ಹಗಲಿರುಳು ದುಡಿದು, ಸದನದಲ್ಲಿ ಗುಡಿದವರು ಎಂದರೆ ಕೆ.ಎಸ್ ಪುಟ್ಟಣ್ಣಯ್ಯ ಎಂದರು.
ರೈತರ ಸಲುವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ರೈತರಲ್ಲಿ ಶಕ್ತಿ ತುಂಬಿ ಜಾಗೃತಿ ಮೂಡಿಸಿದ್ದಾರೆ. ಇದಕ್ಕಾಗಿ ಸದಾ ಹೋರಾಟ ಮಾಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಏಕೈಕ ಶಾಸಕ ಕೆ.ಎಸ್ ಪುಟ್ಟಣ್ಣಯ್ಯನವರು, ವಿಧಾನಸಭೆಯಲ್ಲಿ ಧ್ವನಿ ಎತ್ತಿದವರು ಅಂತಾ ಹೇಳಿದರು. ಸಿಂದಗಿ ತಾಲೂಕು ಸಂಚಾಲಕ ಧರ್ಮಣ್ಣ ಗಬಸವಳಗಿ ಮಾತನಾಡಿ, ರೈತರ ಏಳ್ಗೆಗಾಗಿ ಸದಾ ಶ್ರಮಿಸಿದವರು ಕೆ.ಎಸ್ ಪುಟ್ಟಣ್ಣಯ್ಯನವರು. ರೈತರನ್ನು ಒಗ್ಗೂಡಿಸಿ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ಖಂಡಿಸಿದ್ದಾರೆ. ನಂಜುಂಡಸ್ವಾಮಿ, ಎನ್.ಡಿ ಸುಂದ್ರೇಶಯವರು ರೈತರಲ್ಲಿ ಶಕ್ತಿ ತುಂಬಿದ್ದಾರೆ ಅಂತಾ ಹೇಳಿದರು.
ಈ ವೇಳೆ ಸಿಂದಗಿ ನಗರ ಘಟಕ ಅಧ್ಯಕ್ಷ ಶಿವಪ್ಪ ಸೂಲ್ಪಿ, ಖೈನೂರ ಗ್ರಾಮ ಘಟಕ ಉಪಾಧ್ಯಕ್ಷ ಪರಶುರಾಮ ಮುರುಡಿ, ಗುಬ್ಬೇವಾಡ ಗ್ರಾಮ ಘಟಕ ಅಧ್ಯಕ್ಷ ಶಿವಾನಂದ ಕೊಂಡಗೂಳಿ, ಬಸಪ್ಪ ಹಳೆಮನಿ, ಚಂದ್ರಕಾಂತ ಬೂದಿಹಾಳ, ಜಟ್ಟೆಪ್ಪ ಬಿಸನಾಳ, ಶಂಕರ ದೊಡಮನಿ, ಅನಿಲ ನರಬಳ್ಳಿ ಸೇರಿ ಇತರರು ಉಪಸ್ಥಿತರಿದ್ದರು.




