ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಬಸವಕಲ್ಯಾಣದಲ್ಲಿ ಇತ್ತೀಚೆಗೆ ನಡೆದ 46ನೇ ಶರಣ ಕಮ್ಮಟ ಅನುಭವಮಂಟಪ ಉತ್ಸವ ಸಮಿತಿ ವತಿಯಿಂದ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ತಾಲೂಕಿನ ನಿವೃತ್ತ ಶಿಕ್ಷಕರಾದ ಎಂ.ಜಿ ತಾಳವಾರ ಅವರು ಭಾಗವಹಿಸಿದ್ದರು. ಇಲ್ಲಿ 550 ವಚನಗಳನ್ನು ಕಂಠಪಾಠ ಮಾಡಿದ್ದಾರೆ. ಈ ಮೂಲಕ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ.
ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ 550 ವಚನಗಳನ್ನು ಹೇಳಿ ಎಲ್ಲರಿಂದ ಮೆಚ್ಚುಗೆ ಪಡೆದಿರುವ ಇವರನ್ನು ಸಿಂದಗಿ ತಳವಾರ ಮಹಾಸಭಾ ವತಿಯಿಂದ ಸನ್ಮಾನಿಸಲಾಯಿತು. ಪಟ್ಟಣದ ಲಕ್ಕಮ್ಮ ದೇವಸ್ಥಾನದಲ್ಲಿ ನಡೆದ ತಳವಾರ ಸಮಾಜದ ಸಭೆಯಲ್ಲಿ ಎಂ.ಜಿ ತಳವಾರ ಹಾಗೂ ಶಂಕರ ವಾಲಿಕಾರ ಅವರನ್ನು ಗೌರವಿಸಲಾಯಿತು.
ಈ ವೇಳೆ ಶಿವಾಜಿ ಮೆಟಗಾರ, ಮಲ್ಲು ಹಿರೋಳ್ಳಿ, ಗುಂಡಣ್ಣ ತಳವಾರ, ಪರಶುರಾಮ ಗುಳೂರ, ಸಾಗರ ಜೇರಟಗಿ ಸೇರಿದಂತೆ ಸಮಾಜದ ಹಿರಿಯರು, ಮುಖಂಡರು, ಮಹಾಸಭಾದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.




