ಪ್ರಜಾಸ್ತ್ರ ಸುದ್ದಿ
ರಾಯಚೂರು(Raichoru): ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್ ಯಾವತ್ತೋ ಮುಖ್ಯಮಂತ್ರಿಯಾಗಬೇಕಿತ್ತು. ಇದನ್ನು ತಪ್ಪಿಸಿದವರೆ ಸಿದ್ದರಾಮಯ್ಯ. ಖರ್ಗೆ ಅವರನ್ನು ದೆಹಲಿಗೆ ಓಡಿಸಿದರು. ಪರಮೇಶ್ವರ್ ಅಧ್ಯಕ್ಷರಾಗಿದ್ದರೂ ಸೋಲಿಸಿ ಮನೆಗೆ ಕಳಿಸಿ ಸಿದ್ದರಾಮಯ್ಯ ಸಿಎಂ ಆದರು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸಿಎಂ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಯಾವುದ್ಯಾವುದೋ ಹೆಸರು ಹೇಳುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ಒಕ್ಕಲಿಗರೆ ದಂಗೆ ಏಳಿ ಅಂದಿದ್ನಾ? ನಾನು ಕುರುಬ ಸಮುದಾಯದವನು ಕುರಿ ಕಾಯುತ್ತಿದ್ದೆ. ನನ್ನ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೆ ಕುರಿ ಕಾಯೋವವನನ್ನ ಜೆಡಿಎಸ್ ಎರಡು ಬಾರಿ ಡಿಸಿಎಂ, ಹಣಕಾಸು ಸಚಿವರನ್ನಾಗಿ ಮಾಡಿತು. ಸಿಎಂ ಆಗುವ ಉದ್ದೇಶದಿಂದ ಶಕ್ತಿ ತುಂಬಿದ ಕಾರ್ಯಕರ್ತರಿಗೆ ಟೋಪಿ ಹಾಕಿದರು. ಹೀಗಾಗಿ ಜೆಡಿಎಸ್ ನಿಂದ ಹೊರ ಹಾಕಲಾಯಿತು ಅಂತಾ ಕಿಡಿ ಕಾರಿದರು.
130 ವರ್ಷದ ಪಕ್ಷ ಅಂತಾರೆ. ಹೈಕಮಾಂಡ್ ಗೆ ಎಸ್ಐಆರ್ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಬರೀ ಚೀನಾ ಗಡಿ ವಿಚಾರ ಇಟ್ಟುಕೊಂಡು ಕುತಿದ್ದಾರೆ. ಬನಿಯನ್ನು ಬಿಚ್ಚಿಕೊಂಡು ಓಡಾಡಿದ್ದಾರೆ ಅಂತಾ ಲೇವಡಿ ಮಾಡಿದರು.




