ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇದೀಗ ಟ್ರಾಫಿಕ್ ಸಮಸ್ಯೆ ದೊಡ್ಡ ಮಟ್ಟದಲ್ಲಿ ತಲೆ ದೋರಿದಿದೆ. ಪೊಲೀಸರೆ ಹೇಳುವ ಪ್ರಕಾರ ಅದು 200 ರಿಂದ 300 ಕಿಲೋ ಮೀಟರ್ ಟ್ರಾಫಿಕ್ ಜಾಮ್( Traffic Jam) ಆಗಿದೆ. ಹೀಗಾಗಿ ಅಲಹಾಬಾದ್ ನ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗಾಗಿ ಪೊಲೀಸರು ಭಕ್ತರಿಗೆ ಕೈ ಮುಗಿದು ಮನವಿ ಮಾಡುತ್ತಿದ್ದು, ದಯವಿಟ್ಟು ಮನೆಗೆ ಮರಳಿ ಎನ್ನುತ್ತಿದ್ದಾರೆ.
ಜಬಲ್ಪುರ್, ಕಟ್ನಿ, ರೇವಾ ಮೂಲಕ ಪ್ರಯಾಗ್ ರಾಜ್ ಹೋಗುವ ಪ್ರಮುಖ ರಸ್ತೆಗಳು, ಹೆದ್ದಾರಿಗಳು(Highway) ಸಂಪೂರ್ಣ ಜಾಮ್ ಆಗಿವೆ. 11 ಜಿಲ್ಲೆಗಳಿಗೆ ರೂಟ್ ಚಾರ್ಟ್ ನೀಡಲಾಗಿದೆ. ಹೀಗಾಗಿ ಫೆಬ್ರವರಿ 13ರ ತನಕ ಪ್ರವೇಶ ನಿರ್ಬಂಧಿಸಲಾಗಿದೆ. ಭಕ್ತರು ಸಹಕರಿಸಬೇಕು ಎಂದು ಕೇಳಿ ಕೊಳ್ಳಲಾಗಿದೆ. ದಕ್ಷಿಣ ಭಾರತದಿಂದ ಬರುವ ಜನರಿಗೆ ಮಾರ್ಗಗಳ ಸಮಸ್ಯೆ ಸಾಕಷ್ಟು ಕಾಡುತ್ತಿದೆ.