ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಈ ವರ್ಷವೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಇದೇ ರೀತಿ ಸಿಂದಗಿ ಪಟ್ಟಣದ ವಿದ್ಯಾರ್ಥಿನಿ ಲಕ್ಷ್ಮಿ ರಾಯಪ್ಪ ಬಳುಂಡಗಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 556 ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಕುಟುಂಬಸ್ಥರು, ಸ್ನೇಹಿತರು, ಕಾಲೇಜು ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ.
ಕನ್ನಡ 98, ಇಂಗ್ಲಿಷ್ 81, ಭೌತಶಾಸ್ತ್ರ 92, ರಸಾಯನಶಾಸ್ತ್ರ 96, ಗಣಿತ 90, ಜೀವಶಾಸ್ತ್ರ 99 ಅಂಕ ಪಡೆಯುವ ಮೂಲಕ 600ಕ್ಕೆ 556 ಅಂಕ ಪಡೆದಿದ್ದಾಳೆ. ಪಟ್ಟಣದ ಏಲೈಟ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಶಿಕ್ಷಕರು, ಸಿಬ್ಬಂದಿ ವಿದ್ಯಾರ್ಥಿನಿ ಲಕ್ಷ್ಮಿ ರಾಯಪ್ಪ ಬಳುಂಡಗಿ ಅವರಿಗೆ ಶುಭ ಕೋರಿದ್ದಾರೆ.