ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಅರಮನೆ ಮಂಡಳಿ ಅವರು ಅರಮನೆ ವೇದಿಕೆಯಲ್ಲಿ ಆಯೋಜಿಸಿದ್ದ ಮಾಗಿ ಉತ್ಸವದಲ್ಲಿ ಶನಿವಾರ ನಾಡಿನ ಖ್ಯಾತ ಗಾಯಕ ಲಕ್ಷ್ಮಿರಾಮ್ ಮತ್ತು ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಈ ತಂಡದ ಗಾಯಕರ ಕಂಠದಿಂದ ಮೂಡಿ ಬಂದ ಜಾನಪದ ಗೀತೆಗಳು ಎಲ್ಲರ ಮನಸ್ಸನ್ನು ತಣಿಸಿದವು.
ತಿಂಗಾಳು ಮುಳುಗಿದವೊ, ಸೊಜುಗಾದ ಸೂಜು ಮಲ್ಲಿಗೆ, ಮರೆಯೋದುನ್ತೆ ಮೈಸೂರು ದೊರೆಯ ಗೀತೆ ಸೇರಿದಂತೆ ಹೀಗೆ ಹಲವು ಹಾಡುಗಳನ್ನು ಹಾಡಿ ಜನರ ಮೆಚ್ಚುಗೆ ಗಳಿಸಿದರು. ಗಾಯಕ ಲಕ್ಷ್ಮಿರಾಮ್ ಜೊತೆಗೆ ಗಾಯಕಿ ಭವತಾರಿಣಿ, ಗಾಯಕ ನವೀನ್ ಕುಮಾರ್ ದನಿಯಾದರೆ, ರಾಜೇಶ್, ಬಾಬು, ರೀಚಾರ್ದ್ ವಾದ್ಯ ಸಹಕಾರ ನೀಡಿ ಗಾಯನಕ್ಕೆ ಮೆರಗು ನೀಡಿದರು.