ಪ್ರಜಾಸ್ತ್ರ ಸುದ್ದಿ
ಪಾಟ್ನಾ(Patna): ಆರ್ ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ವಿರುದ್ಧ, ಟಿಕೆಟ್ ಹಾಗೂ ಹಣಕ್ಕಾಗಿ ತಂದೆ ಮೂತ್ರಪಿಂಡ ದಾನವನ್ನು ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಸಹೋದರ ತೇಜಸ್ವಿಯಾದವ್ ಅವರು ಆಪ್ತರು ಆರೋಪಿಸಿದ್ದಾರೆ ಎಂದು ರೋಹಿಣಿ ಆಚಾರ್ಯ ಭಾನುವಾರ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮದುವೆಯಾದ ಮಹಿಳೆ ತನ್ನ ಹೆತ್ತವರನ್ನು ಉಳಿಸಲು ಏನನ್ನೂ ಮಾಡಬಾರದು. ಒಂದು ವೇಳೆ ಸಹೋದರರಿದ್ದರೆ ಅವರ ಅಥವ ಸ್ನೇಹಿತರ ಮೂತ್ರಪಿಂಡವನ್ನು ದಾನ ಮಾಡುವಂತೆ ಹೇಳಬೇಕು. ನನ್ನ ಪತಿ ಮತ್ತು ಅತ್ತೆಯ ಅನುಮತಿ ಪಡೆಯದೆ, ಮೂವರು ಮಕ್ಕಳ ಬಗ್ಗೆ ವಿಚಾರ ಮಾಡದೆ ನನ್ನ ಮೂತ್ರಪಿಂಡವನ್ನು ದಾನ ಮಾಡುವ ಮೂಲಕ ಪಾಪ ಮಾಡಿದ್ದೇನೆ. ಯಾವ ಮಗಳಿಗೆ ಇಂಥ ಗತಿ ಬರದಿರಲಿ ಎಂದು ಹೇಳಿದ್ದಾರೆ.




