Ad imageAd image

ಕಣಿವೆ ನಾಡಿನಲ್ಲಿ ಕೊನೆಯ ಹಂತದ ಮತದಾನ

ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಮಂಗಳವಾರ ನಡೆಯುತ್ತಿದೆ.

Nagesh Talawar
ಕಣಿವೆ ನಾಡಿನಲ್ಲಿ ಕೊನೆಯ ಹಂತದ ಮತದಾನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಶ್ರೀನಗರ(Srinagara): ಕಣಿವೆ ನಾಡು ಜಮ್ಮು ಮತ್ತು(Jammu and Kashmir) ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಮಂಗಳವಾರ ನಡೆಯುತ್ತಿದೆ. 70 ಜಿಲ್ಲೆಗಳು ಸೇರಿದಂತೆ 40 ಕ್ಷೇತ್ರಗಳಿಗೆ ಚುನಾವಣೆ(Election) ನಡೆಯುತ್ತಿದೆ. 415 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂದು 3ನೇ ಹಾಗೂ ಕೊನೆಯ ಹಂತದ ಮತದಾನ ಮುಂಜಾನೆಯಿಂದ ನಡೆಯುತ್ತಿದೆ.

ಚುನಾವಣೆ ಹಿನ್ನಲೆಯಲ್ಲಿ ಅಗತ್ಯ ಪೊಲೀಸ್ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅರೆಸೇನೆ ಹಾಗೂ ಸಶಸ್ತ್ರ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿದೆ. ಕಾಶ್ಮೀರ ವಿಭಾಗದ ಬಾರಾಮುಲ್ಲಾ ಮತ್ತು ಬಂಡಿಪೂರಾ, ಕುಪ್ಪಾರಾ, ಜಮ್ಮು ವಿಭಾಗದಲ್ಲಿ ಜಮ್ಮು ಉದ್ಧಂಪುರ, ಸಾಂಬಾ, ಕಥುವಾ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ(Voting) ನಡೆಯುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಹೆಚ್ಚಿನ ರೀತಿಯಲ್ಲಿ ಮತದಾನ ಮಾಡುವ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಿ ಎಂದು ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article