ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumar) ಅವರು ಸೋಮವಾರ ತಡರಾತ್ರಿ ನಗರದಲ್ಲಿ ರೌಂಡ್ಸ್ ಹಾಕಿ ವಿವಿಧ ರಸ್ತೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಶಾಸಕ ಹಾಗೂ ಬಿಡಿಎ(BDA) ಅಧ್ಯಕ್ಷ ಎನ್.ಎ ಹ್ಯಾರಿಸ್, ಬಿಬಿಎಂಪಿ(BBMP) ಆಯುಕ್ತ ತುಷಾರ್ ಗಿರಿನಾಥ್, ಬಿಎಂಆರ್ ಡಿಎ(BMRDA) ಆಯುಕ್ತ ರಾಜೇಂದ್ರ ಚೋಳನ್ ಸೇರಿದಿಂತೆ ವಿವಿಧ ಅಧಿಕಾರಿಗಳೊಂದಿಗೆ ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಹಾರಿಯಿಂದ ರಸ್ತೆ ಎಗೆದು ನೋಡಿದರು.
ಪಿಇಎಸ್ ಕಾಲೇಜು(College) ಮುಂದೆ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಹಾರಿಯಿಂದ ಅಗೆದು ಗುಣಮಟ್ಟ ಪರಿಶೀಲಿಸಿದರು. ಟ್ರಿನಿಟಿ ಜಂಕ್ಷನ್ ಡಾಂಬರೀಕರಣ ಮಾಡಲು ಮಿಲ್ಲಿಂಗ್ ಕಾಮಗಾರಿ ವೀಕ್ಷಿಸಿದರು. ದೊಮ್ಮಲೂರು ಮೇಲ್ಸೇತುವೆಯಲ್ಲಿನ ನಡೆಯುತ್ತಿರುವ ಮೈಕ್ರೋ ಸರ್ಫೇಸಿಂಗ್ ಕಾಮಗಾರಿ ಪರಿಶೀಲಿಸಿದರು. ಲೋವರ್ ಅಗರಂ ರಸ್ತೆಯ(Road Work) ಡಾಂಬರೀಕರಣ ನೋಡಿದರು. ಬನಶಂಕರಿ ಸರ್ಕಲ್ ಹತ್ತಿರದ ರಸ್ತೆ ದುರಸ್ತಿ ಕಾರ್ಯ ವೀಕ್ಷಿಸಿದರು. ಹೀಗೆ ನಗರದ ವಿವಿಧ ಕಡೆ ಸಂಚಾರ ನಡೆಸಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದರು.