ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಸೇನಾ ನೇಮಕಾತಿ(Army Recruitment) ರ್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕರು ಬಂದಿದ್ದಾರೆ. ಇದರಿಂದಾಗಿ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಭಾನುವಾರ 16 ಜಿಲ್ಲೆಗಳ ಯುವಕರಿಗಾಗಿ ರ್ಯಾಲಿ ಆಯೋಜಿಸಲಾಗಿದೆ. ಶನಿವಾರ ರಾತ್ರಿಯಿಂದಲೇ ಸಿಪಿಎಡ್ ಮೈದಾನದ ಸುತ್ತಮುತ್ತ ಸಾವಿರಾರು ಸಂಖ್ಯೆಯಲ್ಲಿ ಯುವಕರು ಸೇರಿದ್ದಾರೆ. ಇಂದು ರ್ಯಾಲಿ ನಡೆಸುವ ವೇಳೆ ನೂಕುನುಗ್ಗಲು ನಡೆದಿದೆ.
ರಸ್ತೆಪಕ್ಕದಲ್ಲಿಯೇ ಯುವಕರ ಎತ್ತರ ಪರೀಕ್ಷೆ ನಡೆಸಲಾಯಿತು. ರಾಷ್ಟ್ರೀಯ ಮಿಲಿಟರಿ ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಸಲಾಯಿತು. ಟೆರಿಟೋರಿಯಲ್ ಆರ್ಮಿ(Territorial Army) ವಿಭಾಗದಲ್ಲಿ ನೇಮಕಾತಿಗಾಗಿ ಇದನ್ನು ಆಯೋಜಿಸಲಾಗಿದ್ದು, 30 ಸಾವಿರಕ್ಕೂ ಹೆಚ್ಚು ಯುವಕರು ಇದರಲ್ಲಿ ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.