ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಮಂಗಳವಾರ ನಡೆದ ಲಾಠಿ ಚಾರ್ಜ್ ವಿಚಾರಕ್ಕೆ ಸಂಬಂಧಿಸಿದಂತೆ ಬಸವ ಜಯಮೃತ್ಯಂಜಯ ಸ್ವಾಮೀಜಿ ಗುರುವಾರ ಮಾತನಾಡಿ, ನಮ್ಮ ಸಮಾಜದ ಶಾಸಕರೊಬ್ಬರು ಕುಮ್ಮಕ್ಕಿನಿಂದಲೇ ಲಾಠ ಚಾರ್ಜ್ ನಡೆದಿದೆ. ಅದು ಯಾರೆಂದು ಹೆಸರು ಹೇಳಿ ನನ್ನ ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲವೆಂದು ಗಂಭೀರ ಆರೋಪ ಮಾಡಿದ್ದಾರೆ. ಸುವರ್ಣಸೌಧದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ ವೇಳೆ ಸ್ವಾಮೀಜಿ ಮಾತನಾಡಿದ್ದಾರೆ.
ತಮ್ಮ ಸಚಿವ ಸ್ಥಾನಕ್ಕಾಗಿ ಸಮಾಜದ ವಿರುದ್ಧ ಕುಮ್ಮಕ್ಕು ನೀಡಿದ್ದಾರೆ. ಲಾಠಿ ಚಾರ್ಜ್ ಮಾಡಿಸಲಿ, ಗೋಲಿಬಾರ್ ಮಾಡಿಸಲಿ. ಸಮಾಜದಲ್ಲಿ ಒಬ್ಬ ಮಲ್ಲಪ್ಪಶೆಟ್ಟಿ ಇದ್ದರೆ ಏನಾಯಿತು, 1 ಕೋಟಿ 29 ಲಕ್ಷದ 99 ಸಾವಿರದ 999 ಕ್ರಾಂತಿಕಾರಿಗಳಿದ್ದಾರೆ. ಹೆದ್ದಾರಿ ಮೇಲೆ ಚೆಲ್ಲಿದ ರಕ್ತದ ಕಣಕಣಕ್ಕೂ ಬೆಲೆ ಕಟ್ಟಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಹೋರಾಟ ನಡೆಸಲಾಗುತ್ತಿದೆ.