ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ವಿರುದ್ಧ ಲೇಡಿ ಸೂಪರ್ ಸ್ಟಾರ್ ನಯನತಾರಾ(Nayanthara) ಕಿಡಿ ಕಾರಿದ್ದಾರೆ. ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆಗಿರುವ Nayanthara: Beyaond the Fairytale ಸಾಕ್ಷ್ಯಚಿತ್ರದಲ್ಲಿ ನಾನುಮ್ ರೌಡಿ ಧಾನ್ ಸಿನಿಮಾದ 3 ಸೆಕೆಂಡ್ ದೃಶ್ಯ ಬಳಸಿದ್ದಕ್ಕಾಗಿ ನಟ ಧನುಷ್ 10 ಕೋಟಿ ರೂಪಾಯಿ ಬೇಡಿಕೆಯ ಲೀಗಲ್ ನೋಟಿಸ್ ಕಳಿಸಿದ್ದಾರೆ. ಇದಕ್ಕೆ ನಟಿ ನಯನತಾರಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ನಾನುಮ್ ರೌಡಿ ಧಾನ್ ಚಿತ್ರದ ದೃಶ್ಯಗಳನ್ನು ಬಳಸಲು ಧನುಷ್ ಅನುಮತಿ ಕೇಳಿದೆ. ಎಲ್ಲ ಪ್ರಯತ್ನಗಳು ವಿಫಲವಾದವು. ಸಾಕ್ಷ್ಯಚಿತ್ರದಲ್ಲಿ ಬಳಸಲಾದ ದೃಶ್ಯಗಳು ಜನರ ಮೊಬೈಲ್ ನಲ್ಲಿ ರೆಕಾರ್ಡ್ ಆದ ದೃಶ್ಯಗಳಿವೆ. ಇದಕ್ಕೆ ತಕ್ಕ ಉತ್ತರ ನೀಡುತ್ತೇನೆ. ಯಾವುದೇ ಚಿತ್ರರಂಗದ ಹಿನ್ನಲೆಯಿಲ್ಲದ ನಾನು ಒಂಟಿಯಾಗಿ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಅಭಿಮಾನಿಗಳು ಕಾರಣ. ಅಭಿಮಾನಿಗಳು ನೋಡಿದ ಧನುಷ್ ಬೇರೆ. ಅಸಲಿ ಧನುಷ್(Dhanush) ಬೇರೆ ಎಂದು ಕಿಡಿ ಕಾರಿದ್ದಾರೆ