ಪ್ರಜಾಸ್ತ್ರ ಸುದ್ದಿ
ಕಡೂರು(Kadoru): ಬೈಕ್ ಸವಾರರ ಮೇಲೆ ಚಿರತೆಯೊಂದು ದಾಳಿ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹತ್ತಿರ ನಡೆದಿದೆ. ಎಮ್ಮೆದೊಡ್ಡಿ ಗ್ರಾಮದ ಮದಗದ ಕೆರೆ ಹತ್ತಿರ ಬೈಕ್ ನಲ್ಲಿ ಬರುತ್ತಿದ್ದ ಮಂಜಪ್ಪ(56) ಮೂರ್ತಪ್ಪ(55) ಎಂಬುವರ ಮೇಲೆ ಚಿರತೆಯೊಂದು ದಾಳಿ ಮಾಡಿದೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ವಿಷಯ ತಿಳಿದು ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಸೇರಿದರು. ಈ ಮೂಲಕ ಚಿರತೆಯನ್ನು ಓಡಿಸಿದರು. ಎಮ್ಮೆದೊಡ್ಡಿ ಗ್ರಾಮದ ಸುತ್ತಮುತ್ತ ಅರಣ್ಯದಲ್ಲಿ ಚಿರತೆಗಳಿದ್ದು, ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ. ಅವುಗಳ ಸ್ಥಳಾಂತರದ ಬಗ್ಗೆ ಗ್ರಾಮಸ್ಥರು ಹೇಳುತ್ತಿದ್ದರೂ ಅರಣ್ಯ ಇಲಾಖೆ ಗಮನ ಹರಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.