ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಇಷ್ಟು ದಿನ ಮಲೆನಾಡು ಸೇರಿ ಅರಣ್ಯಕ್ಕೆ ಹೊಂದಿಕೊಂಡಿರುವ ಊರುಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದವು. ಇದೀಗ ಗುಮ್ಮಟನಗರಿ ವಿಜಯಪುರದಲ್ಲಿಯೂ ಚಿರತೆ ಹಾವಳಿ ಇತ್ತೀಚೆಗೆ ಶುರುವಾಗಿದೆ. ನಗರದ ಸಿಂದಗಿ ಬೈಪಾಸ್ ಸೇರಿದಂತೆ ವಿವಿಧ ಕಡೆ ಚಿರತೆ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ನಗರದಲ್ಲಿ ಕಳೆದ ರಾತ್ರಿ ಚಿರತೆ ಕಾಣಿಸಿಕೊಂಡಿರುವ ವಿಚಾರ ತಿಳಿದು ಜನರು ಮನೆಯಿಂದ ಆಚೆ ಬರಲು ಭಯ ಪಡುತ್ತಿದ್ದಾರೆ. ಕಾರಿನಲ್ಲಿ ಹೋಗುತ್ತಿದ್ದವರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿರುವ ವಿಡಿಯೋ ಸಹ ವೈರಲ್ ಆಗಿದೆ. ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಮುಂದಾಗಿದ್ದು, ಆದಷ್ಟು ಬೇಗ ಕಾರ್ಯಾಚರಣೆ ನಡೆಯಲಿ. ಜನರು ಭಯಮುಕ್ತರಾಗಿ ತಿರುಗಾಡಲು ಅನುಕೂಲ ಮಾಡಿಕೊಡಲಿ ಎಂದು ಹೇಳುತ್ತಿದ್ದಾರೆ.