ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ದೃಢ ನಿಶ್ಚಯ, ಕಠಿಣ ಪರಿಶ್ರಮ ಕ್ರೀಡೆಗಳಲ್ಲಿ ನಿರಂತರ ಭಾಗವಹಿಸುವಿಕೆಯಿಂದ ಶಿಸ್ತು, ಸ್ನೇಹ, ಸೌಹಾರ್ದ ಮತ್ತು ವ್ಯಕ್ತಿತ್ವ ಬೆಳವಣಿಗೆಗೆ ಬಹಳ ಸಹಕಾರಿಯಾಗುತ್ತದೆ. ಕ್ರೀಡೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ಜಾವಿದ ಜಮಾದಾರ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಜಿಲ್ಲೆಯ ವಿಕಲಚೇತನರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ತಾಲೂಕು ಮಟ್ಟದ ವಿಕಲಚೇತನರ ಹಾಗೂ ಬೌದ್ದಿಕ ವಿಕಲತೆ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯೊಂದಿಗೆ ದೈಹಿಕ ಶಕ್ತಿ, ಸಹಿಷ್ಣತೆ, ಸಮಾಜಿಕ ಏಕೀಕರಣ ಮತ್ತು ಮಾನಸಿಕ ಯೋಗಕ್ಷೇಮ ಹೆಚ್ಚಾಗುತ್ತದೆ. ವಿಶೇಷ ಚೇತನರು ಕ್ರೀಡೆಯ ಪ್ರಯೋಜನೆಗಳನ್ನು ಅರ್ಥ ಮಾಡಿಕೊಂಡು ಪ್ಯಾರಾ ಓಲಂಪಿಕದಲ್ಲಿ ಸಾಧನೆ ಮಾಡಲು ನಿರಂತರ ಪರಿಶ್ರಮ ವಹಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ ಸಹಾಯಕ ನಿರ್ದೇಶಕರಾದ ರಾಜಶೇಖರ ಧೈವಾಡಿ ಮಾತನಾಡಿ, ವಿಶೇಷ ಚೇತನರು ಕ್ರೀಡೆಗಳಲ್ಲಿ ಹೇಗೆ ಸೇರಬೇಕೆಂದು ತಿಳುವಳಿಕೆ ಮತ್ತು ಅರವಿನ ಕೊರತೆ ಇದ್ದು, ಇದರ ಬಗ್ಗೆ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲಾಗುವುದು. ವಿಶೇಷ ಚೇತನರಿಗೆ ಜಿಲ್ಲಾ ಮತ್ತು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆಗೈಯಲು ಕ್ರೀಡಾ ಇಲಾಖೆಯಿಂದ ವಿಶೇಷ ತರಬೇತಿ ನೀಡಲಾಗುವುದು. ಸರ್ಕಾರ ವಿಕಲಚೇತನರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳು ಜಾರಿಗೆ ತಂದಿದ್ದು, ನಿಜವಾದ ಫಲನುಭವಿಗಳಿಗೆ ಮುಟ್ಟಿಸಲಾಗುವುದ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಜಗದೀಶ ಕೆಂಪಲಿಂಗಣ್ಣವರ, ವಿಶೇಷ ಚೇನತರ ಸಂಸ್ಥೆಗಳ ಮುಖ್ಯಸ್ಥರಾದ ನಿಮಿಷ ಆಚಾರ್ಯ, ಪರಶುರಾಮ ಗುನ್ನಾಪೂರ, ಮೊದಿನಬಾಶಾ ಜಹಾಗೀರದಾರ, ಮಹೇಶ ಮುಧೋಳ, ಸುಮಿತ ಪಾಂಡಿಚೇರಿ, ಉಪಸ್ಥಿತರಿದ್ದರು. ಶಿವಶರಣ ಹರಳಯ್ಯಾ ಅಂಧ ಮಕ್ಕಳ ವಸತಿ ಶಾಲೆ, ಸ್ವಪ್ನಾ ಕಿವುಡ ಮತ್ತು ಮೂಕ ಮಕ್ಕಳ ಶಾಲೆ, ದೇಶಪಾಂಡೆ ಬೌದ್ದಿಕ ವಿಕಲತೆ ಮಕ್ಕಳ ಶಾಲೆ, ವಿಜಯಪುರ ಹಾಗೂ ಅಪಾರ ಸಂಖ್ಯೆಯ ವಿಕಲಚೇತನರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ರವಿ ರಾಠೋಡ, ಸ್ವಾಗತಿಸಿದರು. ಶ್ರೀಧರ ಜೋಶಿ ವಂದಿಸಿದರು.




